March 15, 2025

ಬೈಕ್ ಅಡ್ಡಗಟ್ಟಿ ಅನ್ಯಕೋಮಿನ ಯುವಕರಿಂದ ಹಲ್ಲೆ – ಶಾಸಕರಿಂದ ಖಂಡನೆ, ಫೇಸ್‌ಬುಕ್‌ನಲ್ಲಿ ಪೋಸ್ಟ್

Spread the love

ಶಿವಮೊಗ್ಗದಲ್ಲಿ, ಕೆಲಸದ ನಿಮಿತ್ತ ಬೈಕ್ ನಲ್ಲಿ ಅನ್ಯಕೋಮಿನ ಯುವತಿಯನ್ನ ಕೂರಿಸಿಕೊಂಡು ಹೋಗುತ್ತಿದ್ದ ಹಿಂದೂ ಯುವಕನನ್ನು ಥಳಿಸಿರುವ ಘಟನೆ ನಡೆದಿದೆ. ಕುಂಬಾರಗುಂಡಿಯ ಯುವಕ ಎಸ್ ಬಿ ನಂದನ್, ತನ್ನ ಕೆಲಸದ ಸಂಸ್ಥೆಯ ಅನ್ಯಕೋಮಿನ ಯುವತಿಯೋರ್ವಳನ್ನು ಕರೆ ಮಾಡಿ ಆರ್ ಎಂಎಲ್ ನಗರದ ಪರೀದಾ ಅವರ ಮನೆಗೆ ತೆರಳಿದ್ದರು. ಫರೀದಾ ಮತ್ತು ಅವರ ಪತಿ, ಹಣ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿ, ಲ್ಯಾಪ್ ಟ್ಯಾಪ್ ತೆಗೆದುಕೊಂಡು ಹೋಗಲು ಸೂಚಿಸಿದರು. ಬಳಿಕ, ದಂಪತಿಗಳು ಆಟೋದಲ್ಲಿ ತೆರಳಿದರು.

ನಂದನ್, ಯುವತಿಯೊಂದಿಗೆ ಹಿಂತಿರುಗುವಾಗ ಅನ್ಸಾರಿ ಮಸೀದಿಯ ಬಳಿ ಇಬ್ಬರು ಅಡ್ಡಹಾಕಿ, ಟಿಂಬರ್ಸ್ ಒಳಗೆ ಕರೆದುಕೊಂಡು ಹೋಗಿ, “ನಮ್ಮ ಧರ್ಮದ ಹುಡುಗಿಯನ್ನು ಯಾಕೆ ಕರೆದುಕೊಂಡು ಬಂದಿದ್ದೀಯ?” ಎಂದು ಪ್ರಶ್ನಿಸಿದರು. ನಂದನ್ ಮತ್ತು ಯುವತಿ, ಕೆಲಸದ ನಿಮಿತ್ತ ಬಂದಿದ್ದೇವೆ ಎಂದು ಉತ್ತರಿಸಿದರು. ಟಿಂಬರ್ಸ್ ಯಾರ್ಡ್ ನಿಂದ ಹೊರಬರುವ ಸಂದರ್ಭದಲ್ಲಿ, ನಂದನ್ ಮೇಲೆ ಗಟ್ಟಿಯಾದ ವಸ್ತುವಿನಿಂದ ಹೊಡೆದರು. ನಂದನ್ ಓಡಲು ಆರಂಭಿಸಿದಾಗ, 15-20 ಜನ ಅವರನ್ನು ಅಟ್ಟಿಸಿಕೊಂಡು ಬಂದು ಥಳಿಸಿದರು.

ಈ ವೇಳೆ ಮ್ಯಾನೇಜರ್ ಪುರುಷೋತ್ತಮ, ಸಂಜಯ್ ಮತ್ತು ಇಮ್ರಾನ್ ಸ್ಥಳಕ್ಕೆ ಬಂದರು. ಯುವಕರ ಗುಂಪು, “ಇನ್ನೊಮ್ಮೆ ನಮ್ಮ ಹುಡುಗಿಯೊಂದಿಗೆ ಕಾಣಿಸಿಕೊಂಡರೆ ಜೀವ ಸಹಿತಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದರು. ನಂದನ್ ಅವರ ಕಣ್ಣು, ಬಾಯಿ, ಕಿವಿ, ಮತ್ತು ಕಿವಿಯ ಕೆಳಭಾಗ ತೀವ್ರ ಗಾಯಗಳಾಗಿವೆ. 1500 ರೂ. ಹಣ ಕಳೆದಿರುವ ಬಗ್ಗೆ ದೂರು ದಾಖಲಾಗಿದೆ.

ಶಿವಮೊಗ್ಗದ ಶಾಸಕ ಚೆನ್ನಬಸಪ್ಪ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡ ಯುವಕನ ಆರೋಗ್ಯ ವಿಚಾರಿಸಿದರು. ಬಳಿಕ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, “ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹಸಚಿವರು ಕೂಡಲೆ ಶಿವಮೊಗ್ಗದ ಕಡೆಗಮನ ಕೊಡಿ” ಎಂದು ಒತ್ತಾಯಿಸಿದರು.