March 15, 2025

ಪೊಲೀಸ್‌ ಇಲಾಖೆಯ ಸುಜಾತ ರವರಿಗೆ ವಯೋನಿವೃತ್ತಿ…

Spread the love


ಕಳ್ಳ ಖದೀಮರಿಗೆ ಸಿಂಹಸ್ವಪ್ನವಾಗಿದ್ದ ಸಾಗರದ ಲೇಡಿ ಸಿಂಗಂ ಸುಜಾತ ರವರು ವಯೋನಿವೃತ್ತಿ ಪಡೆದಿದ್ದಾರೆ. 1993 ರಲ್ಲಿ ಪೊಲೀಸ್‌ ಇಲಾಖೆಗೆ ಕಾನ್ಸೆಬಲ್‌ ಆಗಿ ಸೇರ್ಪಡೆಗೊಂಡಿದ್ದ ಸುಜಾತ ರವರು, ಸುದೀರ್ಘ 30 ವರ್ಷಕ್ಕೂ ಅಧಿಕ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಈ ಅವಧಿಯಲ್ಲಿ, ಸುಜಾತ ರವರು ತಮ್ಮ ಪ್ರಾಮಾಣಿಕತೆ, ಪರಿಶ್ರಮ, ಮತ್ತು ಶ್ರದ್ಧೆಯಿಂದ ಅಪಾರ ಸಾಧನೆಗಳನ್ನು ಮಾಡಿದರು. ಕಳ್ಳ ಖದೀಮರ ಎದೆ ನಡುಗಿಸಿ, ಹಲವು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ನಿಷ್ಪಕ್ಷಪಾತ ಕ್ರಮ ಕೈಗೊಳ್ಳುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಸುಜಾತ ರವರು ಜನತೆಗೂ ಮತ್ತು ತಮ್ಮ ಸಹೋದ್ಯೋಗಿಗಳಿಗೂ ಮಾದರಿಯಾಗಿದ್ದು, ಅವರ ಕಾರ್ಯನಿಷ್ಠೆ, ಸತ್ಯಸಂಧತೆ, ಮತ್ತು ಧೈರ್ಯವು ಎಲ್ಲರಿಗೂ ಪ್ರೇರಣೆಯಾಗಿದೆ.

ಅವರ ಸೇವಾ ನಿವೃತ್ತಿಯ ಸಮಯದಲ್ಲಿ, ಅವರ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳು ಅವರು ಸಲ್ಲಿಸಿದ ಅಪೂರ್ವ ಸೇವೆಯನ್ನು ಮೆಚ್ಚಿದ್ದಾರೆ. ಸುಜಾತ ರವರು ತಮ್ಮ ವೃತ್ತಿ ಜೀವನದಲ್ಲಿ ಸಾಧಿಸಿದ ಮಹತ್ತರ ಸಾಧನೆಗಳು ಮತ್ತು ಪೊಲೀಸ್‌ ಇಲಾಖೆಗೆ ನೀಡಿದ ಅಮೂಲ್ಯ ಕೊಡುಗೆಗಳು ಎಂದೆಂದಿಗೂ ಸ್ಮರಣೀಯವಾಗಿರುತ್ತವೆ.