
ಮೈಕೋ ಲೇಔಟ್‌ನಲ್ಲಿರುವ ವೆಗಾಸಿಟಿ ಮಾಲ್‌ನಲ್ಲಿ ಬಿಕಾಂ ಪದವೀಧರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು ಸುಹಾಸ್ ಅಡಿಗ (21) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೀಡಾದ ಯುವಕನು ಕ್ಯಾಂಪಸ್ ಸೆಲೆಕ್ಷನ್ ಆಗದ ಕಾರಣದಿಂದ ಬೇಸತ್ತುಕೊಂಡು ಈ ತೀರ್ಮಾನಕ್ಕೆ ಬಂದಿರಬಹುದೆಂದು ಶಂಕಿಸಲಾಗಿದೆ.
ಮಧ್ಯಾಹ್ನ 2.30ರ ಸಮಯದಲ್ಲಿ ವೆಗಾಸಿಟಿ ಮಾಲ್‌ಗೆ ಪ್ರವೇಶಿಸಿದ ಸುಹಾಸ್, 4ನೇ ಮಹಡಿಗೆ ಹೋಗಿ, ಜನರು ನೋಡುತ್ತಲೇ ಕೆಳಗೆ ಹಾರಿದ್ದಾರೆ. ತಲೆಗೆ ಗಂಭೀರ ಪೆಟ್ಟಾಗಿರುವುದರಿಂದ ಅವರು ಸ್ಥಳದಲ್ಲೇ ಮೃತರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆ ಮಾಲ್‌ನಲ್ಲಿ ನೆರೆದಿದೆ ಜನರಿಗೆ ಆಘಾತವನ್ನುಂಟುಮಾಡಿದೆ. ಆತ್ಮಹತ್ಯೆಗೆ ಕಾರಣವೇನು ಎಂಬುದರ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಯುವಕರು ಬಾಳಿನ ಸವಾಲುಗಳನ್ನು ಎದುರಿಸುತ್ತಾ ದುರ್ಬಲ ಕ್ಷಣಗಳಲ್ಲಿ ಇಂತಹ ತೀರ್ಮಾನಗಳನ್ನು ತೆಗೆದುಕೊಳ್ಳದಂತೆ ಮನವಿ ಮಾಡಲಾಗಿದೆ.