
ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಹೋಬಳಿಯ ಕುಂಸಿ ಫೋಲಿಸ್ ಠಾಣೆ ವ್ಯಾಪ್ತಿಯ ವಾಲಕೇಶಪುರ ಹಾಳುರಿನಲ್ಲಿ ಪುರತನ ಕಾಲ ದಿಂದಲೂ ಪಾಳುಬಿದ್ದ ಶಿವನ ದೇವಾಲಯು ಇರುವ ಸ್ಥಳದಲ್ಲಿ ಪ್ರಮಾಣದ ಚಿನ್ನ ಇದೆ ಎಂದು ಈಗ 6ತಿಂಗಳ ಹಿಂದೆ ಪಾಳು ಬಿದ್ದಿರುವ ದೇವಸ್ಥಾನದಲ್ಲಿ ನಿಧಿಗಳ್ಳರು ನಿಧಿ ಶೋಧನೆಗೆ ಬಂದು ಗುಂಡಿ ತೆಗೆದು ಹುಡಕಿ ಹೋಗಿದ್ದರು.

ಅಗ ನೀಧಿ ಸಿಕ್ಕಿತು ಇಲ್ಲವೊ ಯಾರಿಗೂ ಮಾಹಿತಿ ಇಲ್ಲ ಆದರೆ ಅಷ್ಟಕ್ಕೇ ಸುಮ್ಮನಾಗದ ನೀಧಿ ಕಳ್ಳರು ಗುರುವಾರ ರಾತ್ರಿ ಸಮಯದಲ್ಲಿ ಜೆಸಿಬಿ ಬಳಸಿ ಶಿವನ ದೇವಾಲಯವನ್ನು ಹಾಳು ಗೆಡವಿ
ಆಳವಾದ ಕಂದಕವನ್ನು ತೋಡಿದ್ದಾರೆ. ನೀಧಿ ಕಳ್ಳರಿಗೆ ನೀಧಿ ಸಿಕ್ಕಿತೊ ಅಥವಾ ಮಣ್ಣು ಸಿಕ್ಕಿತೊ ಅ ಶಿವನೇ ಬಲ್ಲ ..,?

ಬೇಳಗೆ ಎದ್ದು ಸ್ಥಳ ಪರಿಶೀಲಿಶಿದ ಗ್ರಾಮಸ್ಥರು ಯಾರಿಗೆ ದೂರು ನೀಡಬೇಕು ಎಂದು ಅರಿಯದೆ ನಮ್ಮ ಪತ್ರಿಕೆ ಗಮನಕ್ಕೆ ತಂದಿದ್ದಾರೆ ಇನ್ನದಾರು ಪುರಾತತ್ವ ಇಲಾಖೆ ಅವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಅಳಿವಿನಂಚಿಲ್ಲಿರುವ ಶಿವನ ದೇವಾಲಯವನ್ನು ಉಳಿಸಿ ಎಂದು ಅಖಂಡ ಭಕ್ತಾದಿ ವಾಲಕೇಶಪುರ ಮುಧವಾಲ ಮೈಸವಳ್ಳಿ, ಹಾಗೂ ಹಾರನಹಳ್ಳಿ ಗ್ರಾಮಸ್ಥರ ಆಗ್ರಹವಾಗಿದೆ.
