March 14, 2025

ವಿಲೇಜ್ ಅಕೌಂಟೆಂಟ್ ಸುರೇಶ್.G ಲೋಕಾಯುಕ್ತ ಬಲೆಗೆ!?

Spread the love
ಸುರೇಶ್.G

ಶಿವಮೊಗ್ಗ:

ಮೇ 30ರಂದು ಶಿವಮೊಗ್ಗ ಕಸಬಾ-1 ಹೋಬಳಿಯ ಗಾಡಿಕೊಪ್ಪ ವೃತ್ತದಲ್ಲಿ ಗ್ರಾಮ ಅಡಳಿತ ಅಧಿಕಾರಿ ಸುರೇಶ್ ಜಿ. ಬಿನ್ ನಾಗಪ್ಪಜಿ ಎಂಬುವರು ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಂದ ಬಂಧಿತರಾಗಿದ್ದಾರೆ. ನಗರ ಕೃಷಿನಗರ ವಾಸಿ ಸಂಕೇತ್ ಅವರು ಖರೀದಿಸಿದ ಜಮೀನು ತಮ್ಮ ತಾಯಿ ಶ್ರೀಮತಿ ವೀಣಾ ಬಿ.ಎಂ. ಹೆಸರಿಗೆ ನೋಂದಣಿಗೆ ಸಂಬಂಧಿಸಿದಂತೆ ಗ್ರಾಮ ಆಡಳಿತ ಕಚೇರಿಗೆ ಹೋದಾಗ, ಸುರೇಶ್ ಜಿ. ಜಮೀನು ಖಾತೆಗೆ ರೂ. 6000/- ಲಂಚ ಕೇಳಿದ್ದರು.



ಈ ಬಗ್ಗೆ ಸಂಕೇತ್ ಅವರು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿ, ಮುಂದಿನ ತನಿಖೆಯನ್ನು ಪೊಲೀಸ್ ನಿರೀಕ್ಷಕ ವೀರಬಸಪ್ಪ ಎಲ್ ಕುಸಲಾಪುರ ಅವರು ಕೈಗೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಕ.ಲೋ.ಪೋ. ಅಧೀಕ್ಷಕ ಮಂಜುನಾಥ್ ಚೌಧರಿ ಎಂ.ಹೆಚ್. ಮತ್ತು ಪೊಲೀಸ್ ಉಪಾಧ್ಯಕ್ಷಕ ಉಮೇಶ್ ಈಶ್ವರ ನಾಯ್ಕ ಅವರ ಮಾರ್ಗದರ್ಶನದಲ್ಲಿ, ಲೋಕಾಯುಕ್ತ ಕಚೇರಿ ಸಿಬ್ಬಂದಿಗಳಾದ ವಿ.ಎ.ಮಹಂತೇಶ, ಯೋಗೇಶ್, ಸುರೇಂದ್ರ ಹೆಚ್.ಜಿ., ಬಿ.ಟಿ ಚನ್ನೇರ್ಶ, ಪ್ರಶಾಂತ್‍ಕುಮಾರ್, ರಘುನಾಯ್ಕ, ದೇವರಾಜ್, ಗಂಗಾಧರ, ಪ್ರದೀಪ್, ಗೋಪಿ, ಹಾಗು ಜಯಂತ್ ಹಾಜರಿದ್ದರು.