March 14, 2025

ಚೇಳೂರು ರಸ್ತೆಯಲ್ಲಿ ಜನರನ್ನು ಬಲಿ ಪಡೆಯಳು ಕಾದು ನಿಂತಿರುವ ಬೃಹತ್ ಆಲದ ಮರ……!

Spread the love

 ಚೇಳೂರು:

ತುಮಕೂರು ಮತ್ತು ಚೇಳೂರಿನ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸಾತೇನಹಳ್ಳಿಗೇಟ್ ಅತ್ತಿರ ರಸ್ತೆಯ ಪಕ್ಕದಲ್ಲಿರುವ ಹೋನಗಿದ ಆಲದ ಮರವು ಸಾರ್ವಜನಿಕರಿಗೆ ಭಯ ಹುಟ್ಟಿಸುವಂತಿದೆ .

ಈ ಮರವು ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಕ್ಷಣದಲ್ಲಾದರೂ ಬಿದ್ದು ಅಪಾಯವನ್ನು ಉಂಟುಮಾಡಬಹುದು ಎಂಬ ಆತಂಕ ವ್ಯಕ್ತವಾಗಿದೆ. ಕಳೆದ ವರ್ಷ ಇದೇ ರೀತಿಯ ಶಿಥಿಲ ಸ್ಥಿತಿಯಲ್ಲಿದ್ದ ಆಲದ ಮರವು ಎರಡು ಜನರನ್ನು ಬಲಿತೆಗೆದುಕೊಂಡಿರುವ ಅಪಾಯಕಾರಿ ಘಟನೆ ನೆಡೆದಿರುವುದು ಸತ್ಯದ ಸಂಗತಿ ಯಾಗಿದೆ.



ಈ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಸ್ಥಳೀಯರು ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ, ಇದುವರೆಗೆ ಮರವನ್ನು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಜನರು ರಸ್ತೆ ಬದಿ ನಡೆಯಲು ಹಿಂಜರಿಯುತ್ತಿದ್ದಾರೆ.

ಸಾಮಾನ್ಯವಾಗಿ, ಈ ರೀತಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಸಾರ್ವಜನಿಕರು ಸ್ಥಳೀಯ ಆಡಳಿತಕ್ಕೆ ದೂರು ನೀಡುವುದು ಸೂಕ್ತ. ತಕ್ಷಣವೇ ಮರವನ್ನು ಕತ್ತರಿಸಿ ಸಾರ್ವಜನಿಕರ ಸುರಕ್ಷತೆಯನ್ನು ಬಲಪಡಿಸಬೇಕು. ಅಧಿಕಾರಿಗಳು ಈ ವಿಷಯದ ತುರ್ತುಪ್ರಾಮುಖ್ಯತೆಯನ್ನು ಅರಿತು, ಶೀಘ್ರ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಇದು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಬಹಳ ಮುಖ್ಯವಾದ ವಿಷಯವಾಗಿದೆ. ಈ ಕುರಿತು ಗ್ರಾಮದ ಆಡಳಿತ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡು,ಮರವನ್ನು ತೆರವುಗೊಳಿಸಿದರೆ ಸಾರ್ವಜನಿಕರಿಗೆ ಆಗುವ ಅನಾಹುತವನ್ನ ತಪ್ಪಿಸಬಹುದು… ✍️✍️✍️