March 15, 2025

ಚೇಳೂರು ಗ್ರಾಮಕ್ಕೆ ಜಿಲ್ಲಾಧಿಕಾರಿ ಶುಭಕಲ್ಯಾಣ ರವರು ಭೇಟಿ…..!

Spread the love

ಗುಬ್ಬಿ ತಾಲ್ಲೂಕು ಚೇಳೂರು ಗ್ರಾಮ ಪಂಚಾಯಿತಿಗೆ ಸೇರಿದ ಚೇಳೂರು ಗ್ರಾಮಕ್ಕೆ ಜಿಲ್ಲಾಧಿಕಾರಿ ಶುಭಕಲ್ಯಾಣ ಅವರು ಭೇಟಿ ನೀಡಿದ್ದು, ಬೋರ್‌ವೆಲ್ ದುರಸ್ತಿ ಕಾಮಗಾರಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅನೇಕ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಕಾರ್ಯನಿರ್ವಾಹಕ ಅಧಿಕಾರಿಗಳಾದ ಗ್ರೇಡ್-2 ತಹಶೀಲ್ದಾರ್, AEE RWS ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಪರಿಶೀಲನೆಯಲ್ಲಿ ಪಾಲ್ಗೊಂಡಿದ್ದರು.



ಜಿಲ್ಲಾಧಿಕಾರಿಯವರ ಭೇಟಿ ಮುಖ್ಯವಾಗಿ ಬೋರ್‌ವೆಲ್ ದುರಸ್ತಿ ಕಾರ್ಯದ ಪ್ರಗತಿಯನ್ನು ಪರಿಶೀಲಿಸಲು ಹಾಗೂ ಗ್ರಾಮಸ್ಥರ ನೀರಿನ ಅವಶ್ಯಕತೆಗಳನ್ನು ತಿಳಿದುಕೊಳ್ಳಲು ಕೇಂದ್ರಿತವಾಗಿತ್ತು. ಬೋರ್‌ವೆಲ್ ದುರಸ್ತಿ ಕಾರ್ಯವು ಗ್ರಾಮದ ಜನತೆಗೆ ಮದ್ಯದಲ್ಲಿ ಮಹತ್ವವನ್ನು ಹೊಂದಿದ್ದು, ಈ ಮೂಲಕ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆರಿಸುವಲ್ಲಿ ಆದ್ಯತೆ ನೀಡದ್ದರು



ಅಧಿಕಾರಿಗಳು ಬೋರ್‌ವೆಲ್ ದುರಸ್ತಿಯ ಕಾರ್ಯವು ಎಷ್ಟು ದುರಸ್ತಿಗೊಂಡಿದೆ, ಇನ್ನೇನು ಕಾರ್ಯ ಬಾಕಿ ಇದೆ ಎಂಬುದರ ವಿವರಗಳನ್ನು ಜಿಲ್ಲಾಧಿಕಾರಿಯವರಿಗೆ ವಿವರಿಸಿದರು. ಈ ವೇಳೆ ಗ್ರಾಮಸ್ಥರ ಕೆಲವು ಸಮಸ್ಯೆಗಳಿಗೂ ಜಿಲ್ಲಾಧಿಕಾರಿಯವರು ಸ್ಪಂದನೆ ನೀಡಿದರು



ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯ ಸಹಯೋಗದಿಂದ, ಬೋರ್‌ವೆಲ್ ದುರಸ್ತಿ ಕಾರ್ಯವು ಸಮರ್ಪಕವಾಗಿ ನಡೆಯುತ್ತಿದ್ದು, ಶೀಘ್ರದಲ್ಲೇ ಗ್ರಾಮಸ್ಥರಿಗೆ ನಿರಂತರ ನೀರಿನ ಸರಬರಾಜು ಕೈಗೊಳ್ಳಲು ಸಾಧ್ಯವಾಗಲಿದೆ.

ಜಿಲ್ಲಾಧಿಕಾರಿಯವರ ಈ ಪರಿಶೀಲನೆ ಗ್ರಾಮಸ್ಥರ ಆಶಾವಾದವನ್ನು ಹೆಚ್ಚಿಸಿದೆ. ನಾಡಪ್ರಜೆಯ ಜೀವನಾಡಿಯಾದ ನೀರಿನ ಸಮಸ್ಯೆ ಪರಿಹಾರವಾಗುವುದರೊಂದಿಗೆ, ಗ್ರಾಮವು ಸ್ವಚ್ಛ ನೀರಿನ ಕೊರತೆಯಿಂದ ಮುಕ್ತವಾಗುವಂತೆ ಕಾರ್ಯನಿರ್ವಹಿಸಲಾಗುತ್ತಿದೆ.