
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕೇಂದ್ರವಾದ ಗೌರಿಬಿದನೂರಿನ ವಿಧುರಾಶ್ವತ್ಥದಲ್ಲಿ ಅಪರೂಪದ ಘಟನೆ ನಡೆದಿದೆ. ನಾಗನ ಕಲ್ಲುಗಳ ಮುಂದೆ ನಿಜವಾದ ನಾಗರಹಾವುಗಳು ದಿಢೀರ್ ಪ್ರತ್ಯಕ್ಷವಾಗಿ ಕೆಲಕಾಲ ನೆರೆದಿದ್ದ ಭಕ್ತರಿಗೆ ಹೆಡೆ ಎತ್ತಿ ದಿವ್ಯ ದರ್ಶನ ನೀಡಿವೆ.
ರವಿವಾರ ವಾರಾಂತ್ಯದ ಹಿನ್ನೆಲೆಯಲ್ಲಿ ವಿಧುರಾಶ್ವತ್ಥಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ದಂಡು ನೆರೆದಿತ್ತು. ಬೆಳಗ್ಗೆ 6 ಗಂಟೆ ವೇಳೆಗೆ ದೇಗುಲದ ಆವರಣದಲ್ಲಿರುವ ನಾಗರ ಕಲ್ಲುಗಳ ಮುಂದೆ 2 ನಾಗರ ಹಾವುಗಳು ಪ್ರತ್ಯಕ್ಷವಾಗುತ್ತಾ, ಭಕ್ತರು ಗಾಬರಿಯಾಗಿದ್ದಾರೆ. ಎರಡು ಹಾವುಗಳು ಹೆಡೆ ಎತ್ತಿ, ಕೆಲಕಾಲ ನಾಗರ ಕಲ್ಲುಗಳ ಮುಂದೆ ನಿಂತು ಭಕ್ತರಿಗೆ ದರ್ಶನ ನೀಡಿವೆ. ನಂತರ, ಸಾರ್ವಜನಿಕರು ಮತ್ತು ದೇಗುಲ ಸಮಿತಿಯವರು ದಟ್ಟಣೆ ಕಡಿಮೆ ಮಾಡುತ್ತಿದ್ದಂತೆ, ಆ ಹಾವುಗಳು ಅಲ್ಲಿಯೇ ಇದ್ದ ಹುತ್ತದೊಳಗೆ ಸೇರಿಕೊಂಡಿವೆ.ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ