March 14, 2025

ಕ್ಯಾಂಟರ್ ಪಲ್ಟಿ : ಚಾಲಕ ಪ್ರಾಣಪಯದಿಂದ ಪಾರು..!?

Spread the love


ಮೈಸೂರು :
ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಶೀಟುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ಉರುಳಿ ಬಿದ್ದ ಘಟನೆ ಅರಮನೆ ಬಳಿ ನಡೆದಿದೆ. ಗನ್ ಹೌಸ್ ವೃತ್ತದಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಚಾಲಕ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭಾಸ್ಕರ್ ಎಂಬುವವರಿಗೆ ಸೇರಿದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿದೆ.

ಇದರಿಂದ ಕೆಲ ಸಮಯ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಅಗಿತ್ತು, ತಕ್ಷಣ ಸ್ಥಳಕ್ಕೆ ಕೃಷ್ಣರಾಜ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡರು.

**ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಟ್ರಾಫಿಕ್ ನಿಯಂತ್ರಿಸಿ ಸುಗಮ ಸಂಚರಕ್ಕೆ ಅನುವುಮಾಡಿಕೊಟ್ಟರು**

ಈ ಘಟನೆಯಿಂದ ಯಾವುದೇ ಜೀವಹಾನಿಯಾಗದಿದ್ದು, ಕೆಲ ಸಮಯವು ಈ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದರು ಮತ್ತು ಅಪಘಾತಕ್ಕೆ ಹಿಡದವರನ್ನ ಹೆಚ್ಚಿನ ಚಿಕಿತ್ಸೆಗೆ ಸ್ಥಳಾಂತರಿಸಲಾಗಿಗೆ