
ಮೈಸೂರು :
ನಂಜನಗೂಡು ತಾಲ್ಲೂಕಿನ ಹೆಡತಲೆ ಗ್ರಾಮದಲ್ಲಿ ಎರಡು ಜಿಂಕೆಗಳು ನಾಯಿಗಳ ದಾಳಿಗೆ ಬಲಿಯಾಗಿವೆ. ಬೀದಿನಾಯಿಗಳು ಜಿಂಕೆಗಳ ಗುಂಪಿನ ಮೇಲೆ ದಾಳಿ ಮಾಡಿ, ಒಂದು ಜಿಂಕೆಯನ್ನು ತಕ್ಷಣವೇ ಕೊಂದು ಹಾಕಿವೆ. ಇನ್ನೊಂದು ಜಿಂಕೆಯು ಗಂಭೀರವಾಗಿ ಗಾಯಗೊಂಡು, ರಕ್ಷಣೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದೆ. ಈ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ಗ್ರಾಮದ ಹೊರವಲಯದ ಜಮೀನಿನಲ್ಲಿ ಮೇವು ತಿನ್ನುತ್ತಿದ್ದ ಜಿಂಕೆಗಳ ಗುಂಪಿಗೆ ಈ ದಾಳಿ ನಡೆದಿದೆ. ಈ ಘಟನೆಯು ಗ್ರಾಮಸ್ಥರಲ್ಲಿ ಆತಂಕವನ್ನು ಉಂಟುಮಾಡಿದ್ದು, ಸಂಬಂಧಿಸಿದ ಅರಣ್ಯಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಕೋರಲಾಗಿದೆ.