
ಶಿರಾ ತಾಲೂಕಿನ ಬುಕ್ಕಪಟ್ಟಣ ಗ್ರಾಮದಲ್ಲಿ ಭಾರಿ ಗಾಳಿ ಮಳೆಯಿಂದಾಗಿ ಹೆಚ್ ಪಿ ಗ್ಯಾಸ್ ಕಚೇರಿಯ ಬಳಿ ಒಂದು ಮರ ಉರುಳಿ ಬಿದ್ದಿತ್ತು. ಸಾಧ್ಯ ಯಾವುದೇ ಪ್ರಾಣಪಾಯ ಕಂಡುಬದಿಲ್ಲ ಈ ಕಾರಣದಿಂದ ಬುಕ್ಕಪಟ್ಟಣ ಹಾಗಲವಾಡಿ ಮಾರ್ಗದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಸ್ಥಳೀಯ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಬಂದು, ಜೆಸಿಬಿ ಯಂತ್ರದ ಸಹಾಯದಿಂದ ಮರವನ್ನು ತೆರವುಗೊಳಿಸಿದರು. ಈ ಮೂಲಕ ರಸ್ತೆ ಸಂಚಾರವನ್ನು ಪುನಃ ಆರಂಭಿಸಲು ಸಾಧ್ಯವಾಯಿತು. ತಾತ್ಕಾಲಿಕವಾಗಿ, ವಾಹನಗಳ ಸಂಚಾರಕ್ಕೆ ಕ್ಯಾತೆದೇವನ ಹಟ್ಟಿಯ ಮೂಲಕ ಪರ್ಯಾಯ ಮಾರ್ಗವನ್ನು ವ್ಯವಸ್ಥೆ ಮಾಡಲಾಗಿದೆ.
ಈ ಘಟನೆ ಎಂತಹ ನಿರಂತರ ಮಳೆಯಿಂದಾಗಿ ಸಂಭವಿಸಿದ್ದು, ತಕ್ಷಣದ ಕ್ರಮದಿಂದ ಸಮಸ್ಯೆ ಪರಿಹಾರವಾಗಿದೆ. ಗ್ರಾಮಸ್ಥರು ಹಾಗೂ ರಸ್ತೆ ಬಳಸುವವರು ಪೊಲೀಸರಿಗೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸಹಕಾರ ನೀಡಿದರು. ಈ ಸಂದರ್ಭದಲ್ಲಿಯೂ, ಪ್ರಯಾಣಿಕರು ತಮ್ಮ ಸುರಕ್ಷತೆಗೆ ಹೆಚ್ಚು ಗಮನ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.ಅನಾಹುತ ನಡೆಯುವ ಮುನ್ನವೇ ಹೋನಾಗಿದ ಮರಗಳು ಕಂಡಲ್ಲಿ ಅಧಿಕಾರಿಗಳು ಮೊನ್ನೆಚ್ಚರಿಕೆ ಕ್ರಮ ವಹಿಸಿದರೆ ಆಗುವ ಅನಾಹುತಾ ತಪ್ಪಿಸಭಹುದು…