March 14, 2025

ಗುರುವಂದನಾ ಸಮಾರಂಭ

Spread the love

ಗುಬ್ಬಿ :
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 1992-93ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಭಾನುವಾರ ಪಟ್ಟಣದಲ್ಲಿ ಸ್ನೇಹ ಸಂಗಮ ಹಾಗೂ ಗುರುವಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸುಮಾರು 30 ವರ್ಷಗಳ ನಂತರ ಸಮಾಗಮಗೊಂಡ ಸ್ನೇಹಿತರು ಶಾಲಾದಿನಗಳನ್ನು ಮೆಲುಕು ಹಾಕಿ ಸಂತೋಷಪಟ್ಟರು.

ಶಾಲೆಯ ಮಕ್ಕಳಾಗಿದ್ದವರು ಈಗ ಬೃಹತ್ ಹೊಣೆಗಾರಿಕೆ ಹೊಂದಿದವರು, ಬೇರೆ ಬೇರೆ ಸ್ಥಳಗಳಿಂದ ಈ ಕಾರ್ಯಕ್ರಮಕ್ಕೆ ಸೇರಿ, ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು. ವಿದ್ಯಾರ್ಥಿ ದೆಸರದ ಪ್ರಾರ್ಥನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಚಟುವಟಿಕೆಗಳು ನಡೆಯಿತು.

ಈ ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ ತಮ್ಮ ಜೀವನದಲ್ಲಿ ಮಹತ್ವದ ಪಾಠಗಳನ್ನು ಕಲಿಸಿದ ಶಿಕ್ಷಕರಿಗೆ ಗೌರವ ಸಲ್ಲಿಸುವುದು. ಅವರಿಗೆ ಬೋಧಿಸಿದ ಶಿಕ್ಷಕರಲ್ಲಿ ಪ್ರಸ್ತುತ ಇರುವ ಶಿಕ್ಷಕರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಬಂದ ಹಳೆಯ ವಿದ್ಯಾರ್ಥಿಗಳು, ತಮ್ಮ ಬೋಧಕರಿಂದ ಪಡೆದ ಪಾಠಗಳು ಹಾಗೂ ಮಾರ್ಗದರ್ಶನಗಳು ಹೇಗೆ ತಮ್ಮ ಜೀವನದಲ್ಲಿ ಪ್ರಮುಖ ಪಾತ್ರವಹಿಸಿವೆ ಎಂಬುದನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಶಿಕ್ಷಕರು ಕೂಡಾ ತಮ್ಮ ನೆನಪುಗಳನ್ನು ಹಂಚಿಕೊಂಡರು.

ವಿದಾಯವಾಗುವ ಮುನ್ನ, ಹಳೆಯ ಸ್ನೇಹಿತರು ಮತ್ತೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ತೀರ್ಮಾನ ಮಾಡಿದರು. ಇದರಿಂದ ಶಾಲೆಯ ದಿನಗಳ ನೆನಪುಗಳೇ ಅಲ್ಲದೆ, ಪರಸ್ಪರ ಸಹಾಯ, ಸ್ನೇಹ, ಪ್ರೋತ್ಸಾಹ ಕೂಡಾ ಮುಂದುವರಿಯುವ ಸಾಧ್ಯತೆಯಿದೆ.✍️✍️✍️✍️✍️