
ಸಾಗರ ಗ್ರಾಮಾಂತರ ವ್ಯಾಪ್ತಿ ಆನಂದಪುರ ಶಾಖೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕನೋರ್ವ ಲಾಂಗ್ ಝಳಪಿಸಿದ ದೃಶ್ಯವೊಂದು ವೈರಲ್ ಆಗಿದೆ. ಸ್ಥಳೀಯರಿಂದ ಹಿಡಿದ ಯುವಕನಿಗೆ ಗೂಸ ಬಿದ್ದಿದ್ದು, ಲಾಂಗ್ ಕಿತ್ತು ಕೆರೆಗೆ ಎಸೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಮೀರ್ ಎಂಬ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ಎಸ್ಪಿ ಮಿಥುನ್ ಕುಮಾರ್ ಅವರು, ಆನಂದಪುರದ ಮದುವೆ ಸಮಾರಂಭದಲ್ಲಿ ಸಮೀರ್ ಮತ್ತು ಶಿವ ಭಾಗಿಯಾಗಿದ್ದರು ಎಂದು ಮಾಹಿತಿ ನೀಡಿದರು. ಶಿವ ಸಾರ್ವಜನಿಕ ಸ್ಥಳದಲ್ಲಿ ಕಿರಿಕ್ ಮಾಡಿದ್ದರಿಂದ ಸ್ಥಳೀಯರು ಬೈದಿದ್ದಾರೆ. ಬೈಯಿಸಿಕೊಂಡ ಶಿವ, ಸಮೀರ್ ಅನ್ನು ಕರೆಸಿಕೊಂಡಿದ್ದಾನೆ. ಸಮೀರ್ ಬರುವಾಗ ಸ್ಥಳದಲ್ಲಿ ಲಾಂಗ್ ಹಿಡಿದು ಝಳಪಿಸಿದ್ದಾನೆ.
ಸ್ಥಳೀಯರು ಸಮೀರ್ ಅನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಇಬ್ಬರ ಗಲಾಟೆಗೆ ಕಾರಣ ಏನೆಂದು ತನಿಖೆ ನಡೆಯುತ್ತಿದೆ. ಇವರಿಬ್ಬರು ನಶೆಯಲ್ಲಿದ್ದಾರೇ ಎಂಬುದನ್ನೂ ತಪಾಸಣೆ ಮಾಡಲಾಗುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
