
ಗುಬ್ಬಿ :
ತಾಲೂಕಿನ ಜೀ. ಹೊಸಹಳ್ಳಿ ಹೇರೂರು ಸೇರಿದಂತೆ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವಂತಹ ಕೂಸಿನ ಮನೆಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ ಕುಮಾರ್ ದಿಢೀರ್ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಗಳ ಬಗ್ಗೆ ಮಾಹಿತಿಯನ್ನು ಪಡೆದರು.
ನರೇಗಾ ಯೋಜನೆಯಲ್ಲಿ ಕೆಲಸ ಮಾಡುವಂತಹ ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯವನ್ನು ನೀಡಲಾಗುತ್ತಿದ್ದು ಮಕ್ಕಳ ಪೋಷಣೆ ಹಾಗೂ ಅವರ ವಿದ್ಯಾಭ್ಯಾಸಕ್ಕೆ ಈ ಕೋಸಿನ ಮನೆಗಳು ಅನುಕೂಲವಾಗಿವೆ.
ಅದು ಸರಿಯಾದ ರೀತಿಯಲ್ಲಿ ಬಡ ಮಕ್ಕಳಿಗೆ ತಲುಪಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಪೋಷಣೆ ಗೆ ಅನುಕೂಲವಾಗಬೇಕೆಂಬುದು ಉದ್ದೇಶವಾಗಿದೆ ಆದರೆ ಕೇಳವು ಮದ್ಯಾವರ್ತಿಗಳಿಂದ ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳು ಸರಿಯಾದ ರೀತಿಯಲ್ಲಿ ಸೇರುವುದಿಲ್ಲ ಎನ್ನುವುದು ಅನಿವಾರ್ಯವಾಗಿದೆ.