
ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ವೈದ್ಯರ ಸಮಸ್ಯೆ ಎದ್ದು ಕಾಣಿಸುತ್ತಿದೆ. ಅದರಲ್ಲೂ ಕರ್ತವ್ಯ ದಲ್ಲಿರುವ ವೈದ್ಯರ ಬಳಿ ಕಾದು ಕಾದು ಎಷ್ಟೋ ಮಂದಿ ವಾಪಸ್ ಆಗುತ್ತಿರುವ ಘಟನೆ ನಡೆಯುತ್ತಿದೆ.
ವೈದ್ಯರು ರಜೆ ಹಾಕುವುದು, ಅಥವಾ ಬರುವುದೇ ಲೇಟು, ಮಂದ ಮೇಲೆ ಟೋಕನ್ ಸಿಸ್ಟಮ್ ಹೀಗೆ ಮುಂತಾದ ಕಾರಣಗಳನ್ನು ತೋರಿಸಿ ಅನಾರೋಗ್ಯಾದಿಂದ ಬಂದ ರೋಗಿಗಳಿಗೆ ಕಾಲಕ್ಕೆ ಸರಿಯಾಗಿ ಚಿಕಿತ್ಸೆ ಕೊಡದೆ ಸರ್ಕಾರಿ ಆಸ್ಪತ್ರೆಗೆ ಬರುವುದೇ ಬೇಜಾರು ಎನ್ನಿಸುವಾ ಹಾಗೆ ಆಗಿದೆ ಬಂದ ಬಡ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗಲು ಹಣವಿಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಜನತಗೆ ಸಾಯುವ ಪರಿಸ್ಥಿದೆ ಎದುರಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇದ್ದಸ್ರು ಕೂಡ ಇಲ್ಲವೇನೋ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಇಷ್ಟೆಲ್ಲಾ ಆದರೂ ಕೂಡ ಮುಖ್ಯ ವೈದ್ಯಧಿಕಾರಿಗಳು ಮೌನ ವಹಿಸಿರುವುದಕ್ಕೆ ಕಾರಣವೇನು? ಎಂಬುದೇ ಪ್ರೆಶ್ನೆ ಆಗಿದೆ.