
ಕೆಲಸ ಕೊಟ್ಟ ಬ್ಯಾಂಕ್ ಸೇರಿದಂತೆ ಗ್ರಾಹಕರಿಗೆ ಸಿಬ್ಬಂದಿಗಳೇ ಮಹಾ ಮೋಸ ಮಾಡಿದ್ದಾರೆ. ಕಷ್ಟ ಕಾಲದಲ್ಲಿ ಹಣ ಬೇಕಾದಾಗ ಬ್ಯಾಂಕ್ ನಂಬಿ ಚಿನ್ನದ ಮೇಲೆ ಲೋನ್, FD ಹಣವನ್ನ ಗ್ರಾಹಕರು ಇಟ್ಟಿದ್ದರು. ಆದ್ರೆ, ಸಿಬ್ಬಂದಿಗಳು ಮಾತ್ರ ನಂಬಿಕೆಯಿಂದ ಕೆಲಸ ಕೊಟ್ಟಿದ್ದ ಬ್ಯಾಂಕ್, ಬ್ಯಾಂಕ್ ನಂಬಿದ್ದ ಗ್ರಾಹಕರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ. ಒಂದು ಕಡೆ ಸಿಬ್ಬಂದಿಗಳಿಂದ ಬ್ಯಾಂಕ್ ಮೋಸ ಹೋಗಿದ್ರೆ, ಮತ್ತೊಂದು ಕಡೆ ಬ್ಯಾಂಕ್ ವಿರುದ್ಧ ಗ್ರಾಹಕರು ಆಕ್ರೋಶಗೊಂಡಿದ್ದಾರೆ. ನಮ್ಮಹಣ, ಚಿನ್ನ ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಚಿಕ್ಕಮಗಳೂರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಸಿಬ್ಬಂದಿಗಳೇ ಸೇರಿಕೊಂಡು ಬ್ಯಾಂಕ್ ಮತ್ತು ಗ್ರಾಹಕರಿಗೆ ಮೋಸ
ಚಿಕ್ಕಮಗಳೂರು, ಮೇ.22: ನಗರದ ಬೋಳರಾಮೇಶ್ವರ ದೇವಾಲಯದ ಬಳಿ ಇರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India)ದ ಚಿಕ್ಕಮಗಳೂರು ನಗರ ಶಾಖೆಯಲ್ಲಿ ಸಿಬ್ಬಂದಿಗಳು ನಡೆಸಿರುವ ಕೋಟ್ಯಾಂತರ ರೂಪಾಯಿ ವಂಚನೆ ಕಳೆದ ವರ್ಷದ ನವೆಂಬರ್ನಲ್ಲಿ ಬೆಳಕಿಗೆ ಬಂದಿತ್ತು. ಚಿಕ್ಕಮಗಳೂರು(Chikmagaluru) ಶಾಖೆಯ ಸೆಂಟ್ರಲ್ ಬ್ಯಾಂಕ್ ಮ್ಯಾನೇಜರ್ ಸಂದೀಪ್, ಸಿಬ್ಬಂದಿ ನಾರಾಯಣಸ್ವಾಮಿ ಎಂಬುವವರು ಗ್ರಾಹಕರಿಂದ ಚಿನ್ನ ಪಡೆದು ಲೋನ್ ನೀಡಿ. ಸೆಂಟ್ರಲ್ ಬ್ಯಾಂಕ್ ಲಾಕರ್ನಲ್ಲಿ ನಕಲಿ ಚಿನ್ನವಿಟ್ಟು ಗ್ರಾಹಕರ ಚಿನ್ನವನ್ನ ಮಾರಾಟ ಮಾಡಿದ್ದರು. ಜೊತೆಗೆ FD ಹಣ ಸೇರಿದಂತೆ ಗ್ರಾಹಕರ ಖಾತೆಯಲ್ಲಿದ್ದ ಲಕ್ಷಾಂತರ ಹಣ ಲೂಟಿ ಮಾಡಿದ್ದರು.
ಬ್ಯಾಂಕ್ ಮ್ಯಾನೇಜರ್ ಸಂದೀಪ್, ಸಿಬ್ಬಂದಿ ಸೇರಿದಂತೆ 5 ಜನರ ವಿರುದ್ಧ ದೂರು
ಈ ಸಂಬಂಧ ಸೆಂಟ್ರಲ್ ಬ್ಯಾಂಕ್ ಚಿಕ್ಕಮಗಳೂರು ನಗರ ಠಾಣೆಗೆ ಕಳೆದ ವರ್ಷದ ನವೆಂಬರ್ನಲ್ಲಿ ಬ್ಯಾಂಕ್ ಮ್ಯಾನೇಜರ್ ಸಂದೀಪ್, ಸಿಬ್ಬಂದಿ ಸೇರಿದಂತೆ 5 ಜನರ ವಿರುದ್ಧ ದೂರು ನೀಡಿತ್ತು. ಪೊಲೀಸ್ ತನಿಖೆಯಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು. 6 ತಿಂಗಳ ಕಾಲ ಕಾದು ಕಾದು ಆಕ್ರೋಶಗೊಂಡ ಮೋಸ ಹೋದ ಗ್ರಾಹಕರು ಇಂದು ಬ್ಯಾಂಕಿಗೆ ಬಂದು ಚಿನ್ನ ಹಣ ವಾಪಸ್ ನೀಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.