
ದಿನಾಂಕ 21.05.2024 ರಂದು ಠಾಣಾ ಸರಹದ್ದು ತೋಟದ ಪಾಳ್ಯದಲ್ಲಿ ಅಪರಚಿತ ಇಬ್ಬರು ಮುಖಕ್ಕೆ ಮಾಸ್ಕ್ ಧರಿಸಿದ್ದ ಒಬ್ಬ ಹೆಂಗಸು ಹಾಗೂ ಒಬ್ಬ ಗಂಡಸು ನಿಮ್ಮ ಮಗುವಿಗೆ ಪಲ್ಸ್ ಪೋಲಿಯೋ ಹಾಕಿರುವುದನ್ನ ಚೆಕ್ ಮಾಡಲು ಬಂದಿರುತ್ತೇವೆ.
ಎಂದು ಒಂಟಿ ಮನೆ ಬಳಿ ಹೋಗಿ ಮನೆಯಲ್ಲಿದ್ದ ಮಹಿಳೆಗೆ ಯಾವುದೋ ಮತ್ತು ಬರಿಸುವ ಔಷಧಿಯನ್ನು ಸಿಂಪಡಿಸಿ ಪ್ರಜ್ಞೆ ತಪ್ಪಿಸಿವಂತೆ ಮಾಡಿ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರ ಹಾಗೂ ಮನೆಯಲ್ಲಿದ್ದ ಚಿನ್ನ ಹಾಗೂ ಹಣವನ್ನ ದೋಚಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಂಥ ಅನುಮಾನಾಸ್ಪದ ಅಪರಿಚಿತ ವ್ಯಕ್ತಿಗಳನ್ನ ಮನೆಯ ಬಳಿ ಬಿಟ್ಟುಕೊಳ್ಳಬಾರದು ಹಾಗೂ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೆ 112 ಹಾಗೂ ಸ್ಥಳೀಯ ಪೊಲೀಸ್ ಠಾಣೆ 08131242222 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.✍️✍️✍️✍️