
ಚಿತ್ರದುರ್ಗ: ಜಿಲ್ಲೆಯಲ್ಲಿ ಸತತ ಮಳೆಯಿಂದ ಜಲಮೂಲಗಳಿಗೆ ನೀರು ಹರಿದುಬಂದಿದೆ. ಧರ್ಮಪುರ- ಅರಳೀಕೆರೆ ರಸ್ತೆ ಕುಸಿದಿದ್ದು, ಕಾರೊಂದು ಬೃಹತ್ ಗುಂಡಿಗೆ ಇಳಿದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ
ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಆರಂಭವಾದ ಮಳೆ ಬಿರುಸು ಪಡೆಯಿತು. ಚರಂಡಿ, ಕಾಲುವೆಗಳು ತುಂಬಿ ಹರಿದವು. ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತ್ತು. ತಿಮ್ಮಣ್ಣನಾಯಕ ಕೆರೆಯ ಸಮೀಪದಲ್ಲಿ ನಿರ್ಮಿಸುತ್ತಿದ್ದ ಟೀಪಾರ್ಕ್ ಅಸ್ತವ್ಯಸ್ತಗೊಂಡಿದೆ.
ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯಲ್ಲಿ ಉತ್ತಮ ಮಳೆಯಾಗಿದೆ. ಧರ್ಮಪುರ- ಅರಳೀಕೆರೆ ಸಂಪರ್ಕ ರಸ್ತೆ ಕುಸಿದಿದೆ. ಧರ್ಮಸ್ಥಳದಿಂದ ತಡರಾತ್ರಿ ಅರಳೀಕೆರೆ ಪಾಳ್ಯಕ್ಕೆ ಇದೇ ಮಾರ್ಗವಾಗಿ ಮರಳಿದ ಕಾರು ಕುಸಿದ ಗುಂಡಿಯಲ್ಲಿ ಇಳಿದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ವೇದಾವತಿ ನದಿ ಪಾತ್ರದಲ್ಲಿ ಉತ್ತಮ ಮಳೆ ಸುರಿದಿದ್ದು, ವಿ.ವಿ. ಸಾಗರ ಜಲಾಶಯಕ್ಕೆ 5,680 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ 5 ಸೆಂ.ಮೀ, ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರಿನಲ್ಲಿ 3 ಸೆಂ.ಮೀ ಮಳೆಯಾಗಿದೆ.ಜನತೆಯು ಸಂತಸ ವ್ಯಕ್ತ ಪಡಿಸಿದ್ದಾರೆ