
ಶಿವಮೊಗ್ಗ :ಸಾಗರ
ಶರಾವತಿ ಹಿನ್ನೀರಿನ ದ್ವೀಪದ ಊರಿನಲ್ಲಿ ನಡೆದ ರೌಡಿಸಂನ ಕಥೆ ಇದು. ಏನಾದರೂ ಅಲ್ಲಿ ಆಚಾತುರ್ಯ ಸಮಸ್ಯೆಗಳು ಎದುರಾದರೋ ಅಲ್ಲಿನ ಕರಾಳ ಮುಖಗಳ ಕರಾಳರೂಪ ಬಟಬಯಾಲಾಗುತ್ತದೆ.ನಮ್ಮ ರಾಜ್ಯದಲ್ಲಿಯೇ ನಮಗೆ ರಕ್ಷಣೆ ಇಲ್ಲದಂಥಗಿದೆ ಇನ್ನು ಒರ ರಾಜ್ಯದಲ್ಲಿ ಇನ್ನೇನುಗತಿ
ಸಿಗಂದೂರಿಗೆ ದರ್ಶನಕ್ಕಾಗಿ ಬಂದಿದ್ದ ಹಾಸನದ ಕುಟುಂಬಕ್ಕೆ ಈ ಊರು ತನ್ನ ಕರಾಳ ರೂಪ ತೋರಿದೆ. ಜೀವಹಿಡಿದುಕೊಂಡು ಈ ಊರಿನಿಂದ ಹೊರ ಹೋದರೆ ಸಾಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಏನಾದರೂ ಈ ಕುಟುಂಬ ತಪ್ಪು ಮಾಡಿದೆ ಎಂದರೆ ಥಳಿಸಿ ಬುದ್ದಿವಾದ ಹೇಳಿದ್ದರೆ.! ಹೌದು ಬಿಡಪ್ಪ ಹೊರಗಿನವರ ಹಾವಳಿ ಹೆಚ್ಚಾಯ್ತು ಎನ್ನಬಹುದು.
ಆದರೆ ಸ್ಥಳೀಯರೇ ರಾಕ್ಷಸಿ ರೂಪ ತೋರಿದರೆ ದೂರದಿಂದ ಬಂದ ಪ್ರಯಾಣಿಕರು ಎಲ್ಲಿಗೆ ಹೋಗಬೇಕು? ಹಾಸನದ ಸಂಜಯ್ ರಕ್ಷಿತ್ ಕುಟುಂಬ ಮತ್ತು ಅವರ ಸಹೋದರರಿಬ್ಬರು ಸೇರಿ ಉಡುಪಿ ಕೊಲ್ಲೂರು ಮೂಲಕ ನಿನ್ನೆ ಸಂಜೆ ಸಿಗಂದೂರಿಗೆ ಬಂದಿದ್ದಾರೆ. ದೇವಿಯ ದರ್ಶನ ಪಡೆದಿದ್ದಾರೆ.
ದೇವಿಯ ದರ್ಶನ ಪಡೆದು ಇನ್ನೇನು ಲಾಂಚ್ ಮೂಲಕ ಸಾಗರ ತಲುಪಬೇಕು ಅಲ್ಲೇ ಅಪಘಾತ ಸಂಭವಿಸಿದೆ. ಎದುರಿನಿಂದ ಬಂದ ಖಾಸಗಿ ಬಸ್ ಯಮಸ್ವರೂಪದಲ್ಲಿ ಎದುರಾಗಿದೆ. ಹೊಡೆದ ರಬಸಕ್ಕೆ ಸಂಜಯ್ ರಕ್ಷಿತ್ ಅವರ ಇನ್ನೋವ ಕಾರಿನ ಟಯರ್ ಬರ್ಸ್ಟ್ ಆಗಿದೆ. ನೋಡಿಕೋಡು ಚಲಾಯಿಸಲು ಬರೊಲ್ವಾ ಎಂದು ಬಸ್ ನವರಿಗೆ ಕೇಳಿದ್ದು ಅಷ್ಟೆ ತಪ್ಪುಅಲ್ಲೇ ಇದ್ದ ಸ್ಥಳೀಯ ಗ್ಯಾಂಗ್ ವೊಂದು ಸಂಜಯ್ ರಕ್ಷಿತ್ ಮತ್ತು ಆತನ ಸಹೋದರನ ಮೇಲೆ ಮುಗಿಬಿದ್ದಿದೆ.
ಅಕ್ಷರಶಃ ಯಮಸ್ವರೂಪದಂತೆ ಗಲಾಟೆ ಮಾಡಿದ್ದಾರೆ. ಸಂಜಯ್ ರಕ್ಷಿತ್ ಚಿಕ್ಕಮ್ಮರಿಗೆ ಇನ್ನು ಸ್ವಲ್ಪ ಹೊತ್ತು ಇದ್ದರೆ ನಿಮ್ಮ ಹೆಣವೂ ಸಿಗುವುದಿಲ್ಲವೆಂದು ಬೆದರಿಕೆ ಹಾಕಿದೆ. ವೀಲ್ ಜ್ಯಾಕ್, ಲಾಂಗ್ ಗಳನ್ನ ಹಿಡಿದುಕೊಂಡು ಅಟ್ಯಾಕ್ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ. ಕೆಲ ಯಜಮಾನರ ಸಹಾಯದಿಂದ ಗಲಾಟೆಯಿಂದ ಪ್ರಯಾಣಿಕರನ್ನ ನಡೆಯುವ ಅನಾಹುತದಿಂದ ಬಜಾವ್ ಮಾಡಲಾಗಿದೆ.
ಈ ರೀತಿಯ ಘಟನೆಗಳು ಇಲ್ಲಿ ಹೊಸದಲ್ಲ.!!!

ಕಳೆದ ವರ್ಷ ಮೈಸೂರಿನ ಜನರಿಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವಾಗ ರೈಲಿನಲ್ಲಿ ಆಂದ್ರದ ಕೆಲ ದುಸ್ಕರ್ಮಿಗಳು ರೈಲಿನಲ್ಲಿದ್ದ ಕನ್ನಡಿಗರನ್ನು ತಳಿಸಿದ್ದರು. ಅದೇ ರೀತಿ ನಮ್ಮ ರಾಜ್ಯದಲ್ಲಿ ನಡೆದಿದೆ
ಪ್ರವಾಸಿಗರು ಪ್ರವಾಸಿತಾನಗಳಿಗೆ ದೈರ್ಯದಿಂದ ಬರಲು ಕಾರಣ ಇದು ನಮ್ಮ ರಾಜ್ಯ. ನಮ್ಮ ಜಿಲ್ಲೆ ನಮ್ಮ ಜನ. ಅನ್ನೋ ಭರವಸೆ ಇಂದ ಕುಟುಂಬ ಸಮೇತ ಪ್ರವಾಸಕ್ಕೆಂದು ತೆರಳುತ್ತಾರೆ. ಆದರೆ ಕೆಲವು ಪ್ರವಾಸಿತನದಲ್ಲಿ ಪೊಲೀಸ್ ಠಾಣೆಗಳು ಇದ್ದರು ಕೂಡ ಪ್ರವಾಸಿಗರ ರಕ್ಷಣೆ ಕೊಡುವುದು ಕಷ್ಟ. ಪ್ರವಾಸಿಗರು ಹೆಚ್ಚು ಸೇರೋ ಜಾಗದಲ್ಲಿ ಠಾಣೆಯಲ್ಲಿ ದಾಖಲಾಗುವ ಎಫ್ಐಆರ್ ಗಳು ನೂರು ದಾಟಲ್ಲ.
ಇಂದು ಸಂಜಯ್ ಮತ್ತು ರಕ್ಷಿತ್ ಗೆ ಆದ ಘತಿ ನಾಳೆ…………….!!!!
ಆಚಾತುರ್ಯ ನಡೆಯುವ ಮುನ್ನ ಇಲಾಖೆಯವರು ಎಚ್ಚೆತ್ತುಕೊಂಡರೆ ಅಪರಾಧವನ್ನು ತಡೆಯಭವುದು.!!
ಜೋಗ ಮತ್ತು ಈ ಸಿಗಂದೂರು, ಹೊಳೆಬಾಗಿಲುಗಳು ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರ್ತಾವೆ ವರ್ಷ ಪೂರ್ತಿ ಕಳೆದರು 100 ಎಫ್ಐಆರ್ ದಾಟೊಲ್ಲ ಎಂದರೆ ಇಲ್ಲಿನ ಪ್ರವಾಸಿಗರು ಅಷ್ಟೊಂದು ಸುರಕ್ಷಿತವೆಂದಲ್ಲ. ರಕ್ಷಣೆ ಇಲ್ಲವೆಂದು, ದೂರು ಕೊಟ್ಟವನು ವಾಪಸು ಊರಿಗೆ ತಲುಪುವುದು ಕಷ್ಟ. ದೂರದ ಊರಿನಿಂದ ಬರುವ ನಮಗೆ ಇಲ್ಲಿನ ಉಸಾಬರಿ ಯಾಕೆ ಎಂದು ಸುಮ್ಮನಾಗುತ್ತಾರೆ . ರಕ್ಷಣೆ ಕೊಡುವವರಿಂದಾನೆ ರಕ್ಷಣೆ ಇಲ್ಲಾ ಅಂದಮೇಲೆ ಯಾರು ದೂರು ಕೊಡುತ್ತಾರೆ, ಹೇಳಿ.?????
