March 14, 2025

ಕಾರಿಗೆ ಅಡ್ಡ ಬಂದ ನಾಯಿಯನ್ನು ಉಳಿಸಲು ಓಗಿ ಯುವಕ ಸಾವು.!

Spread the love
ಪ್ರಜ್ವಲ್ ವಾಲ್ಮೀಕಿ



ಶಿವಮೊಗ್ಗದ ಹೊರವಲಯದ ಸಕ್ರಬೈಲಿನ ಹತ್ತಿರ ಕಾರಿಗೆ  ಅಡ್ಡ ಬಂದ ನಾಯಿಯನ್ನ  ತಪ್ಪಿಸಲು ಮುಂದಾದ ಕಾರೊಂದು ಪಲ್ಟಿ ಹೊಡೆದಿದೆ. ಪಲ್ಟಿ ಹೊಡೆದ ಪರಿಣಾಮ ಕಾರನ್ನ ಚಲಾಯಿಸುತ್ತಿದ್ದ ಚಾಲಕ ಸಾವುಕಂಡಿದ್ದಾನೆ.
ಮಂಡಗದ್ದೆಗೆ ಭಾನುವಾರದ ಜಾಲಿ ರೈಡ್ ಗೆ ಮುಂದಾಗಿದ್ದ ಯುವಕರು  ಎರಡು ಕಾರಿನಲ್ಲಿ  ತೆರಳಿದ್ದಾರೆ. ಮಂಡಗದ್ದೆಯಲ್ಲಿ ಊಟ ಮುಗಿಸಿ ವಾಪಾಸ್ ಶಿವಮೊಗ್ಗಕ್ಕೆ ಬರುವಾಗ ಕಾರಿಗೆ ನಾಯಿಯೊಂದು ಅಡ್ಡ ಬಂದಿದೆ.

ನಾಯಿಯನ್ನ ತಪ್ಪಿಸಲು ಹೋಗಿ ಒಂದು ಕಾರು ಪಲ್ಟಿ ಹೊಡೆದಿದೆ. ಕಾರುಪಲ್ಟಿ ಹೊಡೆದಪರಿಣಾಮ ಕಾರು ಚಲಾಯಿಸುತ್ತಿದ್ದ ಪ್ರಜ್ವಲ್ ವಾಲ್ಮಿಖಿ(23) ಸಾವುಕಂಡಿದ್ದಾರೆ. ಹಿಂದಿನಿಂದ ಬರುತ್ತಿದ್ದ ಕಾರಿನವರು ಅಪಘಾತಕ್ಕೊಳಗಾದವರನ್ನ ಕರೆತಂದು ಆಸ್ಪತ್ರೆಗೆ ಸೇರಿಸಿದ್ದಾರೆ.


ಪ್ರಕರಣ ತುಂಗನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ. ಅಪಘಾತಕ್ಕೊಳಗಾದ ಐವರಲ್ಲಿ ನಾಲ್ಲು ಜನ ಗಾಂಧಿ ಬಜಾರ್ ನ ಯುವಕರಾಗಿದ್ದು ಓರ್ವ ವಿದ್ಯಾನಗರದ ಯುವಕರಾಗಿದ್ದಾರೆ. ಈ ಘಟನೆಸುಮಾರು  ಈ‌ ಘಟನೆ ನಿನ್ನೆ ರಾತ್ರಿ 9-30 ರ ಸುಮಾರಿಗೆ ಸಂಭವಿಸಿದೆ ಎಂದು ತಿಳಿದು ಬಂದಿದೆ.