ರಾಜ್ಯದಲ್ಲಿ ಸಾವಿರಾರು ಸೈಬರ್ ಕ್ರೈಂ ಕೇಸ್‌ಗಳು! ಸೆರೆಸಿಕ್ಕ ವಂಚಕರು ಬೆರಳೆಣಿಕೆಯಷ್ಟು ಮಾತ್ರ!
ಕರ್ನಾಟಕ ಪೊಲೀಸರಿಗೆ ಸೈಬರ್ ಅಪರಾಧಗಳು ಸವಾಲಾಗಿ ಪರಿಣಮಿಸಿವೆ. ರಾಜ್ಯದ ಪ್ರತಿ ಜಿಲ್ಲೆಗೆ ಪ್ರತ್ಯೇಕವಾಗಿ ಸೈಬರ್ ಪೊಲೀಸ್ ಠಾಣೆ ಸ್ಥಾಪಿಸಿದ್ದರು ಪೊಲೀಸರ ಕೈಗೆ ಸಿಕ್ಕ ಸೈಬರ್ ವಂಚಕರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು ಮಾತ್ರ.

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ಸೈಬರ್ ವಂಚನೆ ಪ್ರಕರಣಗಳಲ್ಲಿ ಶಿಕ್ಷೆಯಾದ ಪ್ರಕರಣಗಳ ಸಂಖ್ಯೆ ಶೇ. 0.12 ಮಾತ್ರ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ ಆದರೆ ಸೈಬರ್ ವಂಚಕರು ಪೋಲೀಸರ ಕೈಗೆ ಸಿಕ್ಕಿ, ಶಿಕ್ಷೆಯಾಗಿರುವ ಪ್ರಕರಣಗಳ ಸಂಖ್ಯೆ ಕೇವಲ 51 ಜನರು ಮಾತ್ರ ಅಷ್ಟೇ.
ಸೈಬರ್ ವಂಚಕರು ಕಡಿಮೆ ಪ್ರಮಾಣದಲ್ಲಿ ಇದ್ದರು ಮಾಡುವ ಅಪರಾಧಗಳು ತುಂಬಾ ಇಂಥವರ ಕೈಗೆ ಜನತೆಯು ಕೂಡ ತುಂಬಾ ಎಚ್ಚರವಾಗಿರಬೇಕು