
ಶಿವಮೊಗ್ಗ ಜಿಲ್ಲೆ
ಕೆ ಎಸ್ ಆರ್ ಟಿಸಿ ಬಸ್ ಬೈಕ್ ನಡುವೆ ಅಪಘಾತ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಶಾಂತಪುರದಲ್ಲಿ ನಡೆದಿದೆ. ಗಾಯಾಳು ಗಳನ್ನು ಮತ್ತಿಘಟ್ಟ ನಿವಾಸಿಗಳಾದ ಯಶವಂತ್, ಲೋಕೇಶ್ ಮತ್ತು ಶಶಿಕುಮಾರ್ ಎಂದು ಗುರುತಿಸಲಾಗಿದೆ.
ಕೆಲಸಕ್ಕೆಂದು ಬೈಕಿನಲ್ಲಿ ತೆರಳುತ್ತಿದ್ದಾಗ ಶಿವಮೊಗ್ಗ ಕಡೆಗೆ ಚಲಿಸುತ್ತಿದ್ದ ಬಸ್‌ಗೆ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್ ಸವಾರರಲ್ಲಿ ಓರ್ವನ ಕಾಲು ತುಂಡಾಗಿದ್ದು ಮತ್ತಿಬ್ಬರಿಗೂ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ.