March 14, 2025

Marks card ಕೊಡಲು ಲಂಚ: ಶಿಕ್ಷಣ ಇಲಾಖೆ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ.!?

Spread the love

ಕಲಬುರಗಿ: ಮೆಟ್ರಿಕ್ ನಕಲು ಮಾರ್ಕ್ಸ್ ಕಾರ್ಡ್ ನೀಡಲು 5000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಶಿಕ್ಷಣ ಇಲಾಖೆಯ ಇಬ್ಬರು ಎಫ್.ಡಿ.ಎ ಗಳು ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.

ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳನ್ನು ಶಿವಶಂಕರಯ್ಯ ಹಾಗೂ ಜಟ್ಟಿಂಗ್ರಾಯ ಎಂದು ಗುರುತಿಸಲಾಗಿದೆ. ಇವರಿಬ್ಬರು ಹತ್ತನೇ ತರಗತಿಯ ಮಾರ್ಕ್ಸ್ ಕಾರ್ಡಿನ ನಕಲನ್ನು ನೀಡಲು ವಿದ್ಯಾರ್ಥಿಯ ತಂದೆಯಿಂದ 5000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಶನಿವಾರ ಸಾರ್ವಜನಿಕ ಸ್ಥಳ ಒಂದರಲ್ಲಿ ದೂರುದಾರ ಆರೂನ್ ಖತೀಬ್ ಅವರಿಂದ 2000 ರೂ. ತೆಗೆದುಕೊಳ್ಳುತ್ತಿರುವಾಗ ಲೋಕಾಯುಕ್ತ ಇನ್ಸ್ ಪೆಕ್ಟರ್ ಅಕ್ಕಮಹಾದೇವಿ ತಮ್ಮ ಸಿಬಂದಿಯೊಂದಿಗೆ ದಾಳಿ ಮಾಡಿ ಬಂಧಿಸಿದ್ದಾರೆ.
ಫೊನ್ ಪೇ ಮೂಲಕ ಆರೂನ್ 3000 ನೀಡಿದ್ದರು. ಆದರೂ ಅಂಕಪಟ್ಟಿ ಪ್ರತಿ ಕೊಡಲು ಪೀಡಿಸಿದ್ದರಿಂದ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು.ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.