March 14, 2025

ತಿಪಟೂರು ಮಿನಿ ಸೌದದಲ್ಲಿ ಪ್ರಿಂಟರ್ ಕದ್ದ ಖದೀಮ.!?

Spread the love
ಸಾಂದರ್ಭಿಕ ಚಿತ್ರ :



ತುಮಕೂರು

ಜಿಲ್ಲೆಯ ತಿಪಟೂರು ನಗರದ ಮಿನಿ ವಿಧಾನಸೌಧದ ಸರ್ವೇ ವಿಭಾಗದಕಚೇರಿಯಲ್ಲಿ ಎರಡು ಕಂಪ್ಯೂಟರ್ ಪ್ರಿಂಟರ್‌ಗಳನ್ನು ವ್ಯಕ್ತಿ ಕಳ್ಳತನ ಮಾಡಿರುವ ಘಟನೆ ಬೆಳಿಗ್ಗೆ  ಮಿನಿ ವಿಧಾನ ಸೌದದಲ್ಲಿ ನಡೆದಿದೆ.

ಕಚೇರಿ ಪ್ರಾರಂಭಕ್ಕೂ ಮೊದಲೇ ಮುಖಕ್ಕೆ ಮಾಸ್ಕ್ ಧರಿಸಿದ್ದ ವ್ಯಕ್ತಿ ಕಚೇರಿಯ ಒಳಗೆ ಬಂದು ಎರಡು ಪ್ರಿಂಟರ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಘಟನೆಯೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಪ್ರಕರಣ ನಗರ ಪೊಲೀಸ್‌ ಠಾಣೆವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಖದೀಮ ಯಾರು ಪೊಲೀಸ್ ತನಿಖೆಯಲ್ಲಿ ತಿಳಿದು ಬರ ಬೇಕಿದೆ