March 14, 2025

ರಾಜ್ಯದ ಗಡಿ ಭಾಗ ಪಾವಗಡ ತಾ. ಕನ್ನೇಮೆಡಿ ಗ್ರಾ/ಪಂ.ಯ ಅಭಿವೃದ್ಧಿ ಅಧಿಕಾರಿ ಮತ್ತು ಮದ್ಯವರ್ತಿಗಳ ಭ್ರಮಾಂಡ ಭ್ರಷ್ಟಾಚಾರ …..

Spread the love

     

ತುಮಕೂರು :

ರಾಜ್ಯದ ಗಡಿ ಭಾಗದ ಗ್ರಾಮಗಳಿಗೆ, ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಿಂದ ಮತ್ತು ಮದ್ಯಾವರ್ತಿಗಳಿಂದ ನಡೆಯುವ ಗ್ರಾಮಭಿವೃದ್ಧಿ ಕಾಮಗಾರಿಯಲ್ಲಿ ನಡೆಯುವ ಹಗಲು ಧರೋಡೆ!……

ಚರಂಡಿ ನಿರ್ಮಾಣ ಮಾಡದಿದ್ದರೂ ಆಗಿರುವುದಾಗಿ ಗುತ್ತಿಗೆದಾರರು ಹಣ ಪಡೆದಿರುವರು.


ರಾಜ್ಯದಲ್ಲಿ ಹಲವಾರು ಜಿಲ್ಲೆ ಮತ್ತು ಹಲವಾರು ತಾಲ್ಲೂಕು ಗಳಲ್ಲಿ ಗ್ರಾಮದ ಬಡರೈತರು ನೀರ್ಗತಿಕರು ಕೂಲಿ ಕಾರ್ಮಿಕರ ಬೇರೆ ರಾಜ್ಯಗಳಿಗೆ ಗುಳೇ ಹೋಗುವುದನ್ನು ನಿಲ್ಲಿಸುವದಕ್ಕಾಗಿ ನರೇಗ ಕಾಮಗಾರಿಗಳನ್ನು -ಹಳ್ಳಿ ಜನರ ಒಳಿತಿಗಾಗಿ-ಕಲ್ಯಾಣಕ್ಕಾಗಿ ಅಭಿವೃದ್ಧಿಗಾಗಿ ನಮ್ಮ ಸರ್ಕಾರವು ಒಂದು ವಿಶೇಷ ಪರಿಕಲ್ಪನೆಯನ್ನು ರೂಪುಗೊಳಿಸಿ, ಅದನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತಂದು, ಕರ್ನಾಟಕದಲ್ಲಿರುವ ಗ್ರಾಮಪಂಚಾಯಿತಿಯ ಯೋಜನೆಗಳಿಗೆ ಸರ್ಕಾರದಿಂದ ನಿಗಧಿತ ನಿಧಿಯನ್ನು ಮಂಜೂರು ಮಾಡುವಂತಹ,
ಅದೇ ರೀತಿ ಅವನ್ನು ಸೂಕ್ತ ಹಳ್ಳಿಯ ಜನರಿಂದಲೇ ಒಂದಿಷ್ಟು ಕೆಲಸಕ್ಕೆ ಕೂಲಿ ನಿಗದಿ ಮಾಡಿ ಜನರಿಗೆ ತಲುಪಿಸುವಂತಹ ನಿಟ್ಟಿನಲ್ಲಿ ಯೋಜನೆಗಳನ್ನು ಸದರಿ ಇಲಾಖೆಯ ವತಿಯಿಂದ ಮುಂದುವರೆಸಿಕೊಂಡು ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. “ಗಣೇಶನ್ನ ಮಾಡು ಅಂದ್ರೆ ಅವರಪ್ಪನ್ನ ಮಾಡುವಂತಹ” ಅನೇಕ ಅವಿವೇಕಿ-ಆಸೆಬುರುಕ ಅಧಿಕಾರಿಗಳ ಕೈಗೆ ಇಂತಹ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕನ್ನಮೇಡಿ, ಗ್ರಾ ಪಂ ಯೋಜನೆಗಳು ಸಿಕ್ಕು, ಅವೆಲ್ಲಾ ಎಷ್ಟರಮಟ್ಟಿಗೆ ದುರುಪಯೋಗಕ್ಕೆ ಕಾರಣವಾಗಿದೆ ಎಂದರೆ… ಗ್ರಾಮ ಪಂಚಾಯತಿಗೆ ಸಂಬಂಧ ಪಟ್ಟಹಳ್ಳಿಯ ಜನತೆಗೆ ಅದರ ಅನುಕೂಲಗಳೇ ತಲುಪದೇ. ಸರ್ಕಾರದ ಸವಲತ್ತೆಲ್ಲವೂ ಇಂತಹ ಹರಾಮಿ ಹೊಟ್ಟೆಬಾಕ ಅಧಿಕಾರಿಗಳ-ಮನೆಹಾಳ ಮಧ್ಯವರ್ತಿಗಳ ಪಾಲಾಗುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ. ಈ ವಿಷಯ ತಿಳಿದು ಗ್ರಾಮಸ್ಥರು ಕಳಪೆ ಕಾಮಗಾರಿ ಮಾಡಿರುವ ಅಧಿಕಾರಿಗಳಿಗೆ  ವಿರುದ್ಧ 10ಕ್ಕೂ ಹೆಚ್ಚು ಭಾರಿ R T I (ಮಾಹಿತಿ ಹಕ್ಕು) ಮುಖಂತರ ಮಾಹಿತಿ ಕೇಳಿದರೆ ಸರಿಯಾದ ಉತ್ತರ ಕೊಡದೆ ಸಂಬಂಧನೆ ಇಲ್ಲದೆ ಇರುವಂತಹ ಧಾಖಲೆಗಳನ್ನು ಕೊಟ್ಟು ಸರ್ಕಾರದ ಕಣ್ಣಿಗೆ ಮಣ್ಣು ಎರಚಿರುವದಲ್ಲದೆ ಮಾಹಿತಿ ಕೇಳಿರುವರ (ಗ್ರಾಮಸ್ಥರ)ದಿಕ್ಕು ತಪ್ಪಿಸುವ ಕೆಲಸ ಮಾಡಿರುವುದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಇಲಾಖೆಯೊಳಗೆ ವಕ್ಕರಿಸಿರುವ ಕೂಳುಬಾಕ ಅಧಿಕಾರಿಗಳೇನಿದ್ದಾರೆ. ಅವರಲ್ಲಿ ಕೆಲವರ ಕಳ್ಳಾಟಗಳನ್ನು ಇಲ್ಲಿ ಹಂತಹಂತವಾಗಿ ವಿವರಿಸುತ್ತಾ ಹೋಗುತ್ತೇವೆ ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕು ಕನ್ನಮೇಡಿ ಗ್ರಾ.ಪಂ ಯಲ್ಲಿ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ನಡೆಸದೆ ಮತ್ತು ಕಾಮಗಾರಿಗಳನ್ನು ಪೂರ್ಣಗೊಳಿಸದೇ ಬಿಲ್ ಮಾಡಿ ಅವ್ಯವಹಾರ ನಡೆಸಿರುವ ಬಗ್ಗೆ ಹರೀಶ್ ಮತ್ತು ನಾಗಭೂಷಣ್ ಚಿತ್ತಗಾನಹಳ್ಳಿ, ಕಿಲಾರ್ಲಹಳ್ಳಿ (ಅಂಚೆ), ಪಾವಗಡ ರವರು ದಿ:17.02.2024 ರಂದು ಹಲವಾರು ಪ್ರಕರಣಗಳ ಬಗ್ಗೆ ದೂರು ಅರ್ಜಿ ಸಲ್ಲಿಸಿದ್ದರು ಈ ಅವ್ಯವಹಾರ ಬಗ್ಗೆ ತನೀಖೆ ಕೈಗೊಂಡ  ಡಾ|| ವಿ ಸಾಂಬಾಜಿ ರಾವ್ ಒಂಬಡ್ಸಮ್ಯಾನ್ ಜಿಲ್ಲಾ ಪಂಚಾಯತ್, ತುಮುಕೂರು ಜಿಲ್ಲೆ ಅವರು ಖುದ್ದು 3. ಪ್ರಕರಣಕ್ಕೆ  ಮಾತ್ರ ಸಂಬಂಧಿಸಿದಂತೆ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ, ಅನುಷ್ಟಾನಿಸಿರುವ ಕಾಮಾಗಾರಿಯ ನೈಜತೆಯನ್ನು ಅರಿಯಲು, ದಿ:11.03.2024 ಗ್ರಾ ಪಂ ಗೆ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಸ್ಥಳ ಮಹಜರ್ ಸಮಯದಲ್ಲಿ ಎದುರುದಾರರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ತಾಂತ್ರಿಕ ಸಹಾಯಕರು, ತಾಂತ್ರಿಕ ಸಂಯೋಜಕರು, ಮತ್ತು ಡಿ.ಇ.ಒ ರವರು ಸಮುಕ ಸ್ಥಳತನಿಖೆ ಸಂದರ್ಭದಲ್ಲಿ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿದಾಗ ಈ ಕೆಳಕಂಡ ಅಂಶಗಳನ್ನು ಗಮನಿಸಲಾಯಿತು ಎಂದು ಡಾ|| ವಿ ಸಾಂಬಾಜಿ ರಾವ್ ಓಂಬಡ್ಸ್ ಪರ್ಸನ್ ಜಿಲ್ಲಾ ಪಂಚಾಯತ್, ತುಮುಕೂರು ಜಿಲ್ಲೆ ಇವರು ಸಂಬದ್ದ ಪಟ್ಟವರಿಗೆ ವರದಿ ಸಲ್ಲಿಸಿದ್ದಾರೆ.

ವರದಿಯಲ್ಲಿರುವ ಅಂಶ

ಚಿತ್ತಗಾನಹಳ್ಳಿ ಗ್ರಾಮದ ಮುಖ್ಯ ರಸ್ತೆಯಿಂದ 

1).ಕೃಷ್ಣಪ್ಪನವರ ಮನೆಯವರೆಗೆ ಸಿ.ಸಿ ರಸ್ತೆ ಕಾಮಗಾರಿ:- ಈ ಕಾಮಗಾರಿಯ ಅಂದಾಜು ಮೊತ್ತ 199979.00 ರೂ ಆಗಿದ್ದು, ಕ್ರಿಯಾ ಯೋಜನೆ ಅನುಮೋದನೆಯಾಗಿರುತ್ತದೆ. ಕೂಲಿ ಮೊತ್ತ 31777.00 ರೂ ಆಗಿದ್ದು, ಸಾಮಗ್ರಿ ಮೊತ್ತ 168201.00 ರೂ ಆಗಿರುತ್ತದೆ. ಸದರಿ ಕಾಮಗಾರಿಯೂ ನಡೆದಿರುವುದಿಲ್ಲವೆಂದು ಸ್ಥಳ ತನಿಖೆ ಸಮಯದಲ್ಲಿ ಕಂಡುಬಂದಿದ್ದು, ನರೇಗಾ ಯೋಜನೆಯ ಸರ್ಕಾರಿ ಹಣ ದುರುಪಯೋಗವಾಗಿರುವುದು ಕಂಡುಬಂದಿರುತ್ತದೆ,

2).ನಾಗರಾಜು ಮನೆಯಿಂದ ಕನ್ನಮೇಡಿ ಮುಖ್ಯ ರಸ್ತೆಯ ವರೆಗೆ ಚರಂಡಿ ಕಾಮಗಾರಿ:-

ಈ ಕಾಮಗಾರಿಯ ಅಂದಾಜು ಮೊತ್ತ 149994.00 ರೂ ಆಗಿದ್ದು, ಕ್ರಿಯಾ ಯೋಜನೆ ಅನುಮೋದನೆಯಾಗಿರುತ್ತದೆ, ಕೂಲಿ ಮೊತ್ತ 21080.00 ರೂ ಆಗಿದ್ದು, ಸಾಮಗ್ರಿ ಮೊತ್ತ 115894.00 ರೂ ಆಗಿರುತ್ತದೆ, ಸದರಿ ಕಾಮಗಾರಿಯೂ ನಡೆದಿರುವುದಿಲ್ಲವೆಂದು ಸ್ಥಳ ತನಿಖೆ ಸಮಯದಲ್ಲಿ ಕಂಡುಬಂದಿದ್ದು, ನರೇಗಾ ಯೋಜನೆಯ ಸರ್ಕಾರಿ ಹಣ ದುರುಪಯೋಗವಾಗಿರುವುದು ಕಂಡುಬಂದಿರುತ್ತದೆ.

3).ಚಿತ್ತಗಾನಹಳ್ಳಿಯಿಂದ ಬಾಬಯ್ಯನ ದೇವಸ್ಥಾನದ ವರೆಗೆ ರಸ್ತೆ ನಿರ್ಮಾಣಾ ಕಾಮಗಾರಿ:-

  ಈ ಕಾಮಗಾರಿಯ ಅಂದಾಜು ಮೊತ್ತ 149994.00 ರೂ ಆಗಿದ್ದು, ಕ್ರಿಯಾ ಯೋಜನೆ ಅನುಮೋದನೆಯಾಗಿದ್ದು, ಕೂಲಿ ಮೊತ್ತ 249133.00 ರೂ ಆಗಿದ್ದು, ಸಾಮಗ್ರಿ ಮೊತ್ತ 50867.00 ರೂ ಆಗಿರುತ್ತದೆ, ಸದರಿ ಕಾಮಗಾರಿಯೂ ನಡೆದಿದ್ದು, ಸ್ಥಳ ತನಿಖೆ ಸಮಯದಲ್ಲಿ ಕಂಡುಬಂದಿದ್ದು, ಕೂಲಿ ಕಾರ್ಮಿಕರಿಂದ ಕೆಲಸ ಮಾಡಿಸಿರುತ್ತಾರೆ, ಹಾಗೂ ನರೇಗಾ ಮಾರ್ಗಸೂಚಿಯಂತೆ ಕಡತ ನಿರ್ವಹಿಸಿರುವುದಿಲ್ಲ,

ಈ ಮೇಲೆ ಹೇಳಿದ ಎಲ್ಲಾವು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಾರ್ಯಾಚರಣೆಗಳ ಮಾರ್ಗಸೂಚಿಗಳ 2005 ರ ಸ್ವಷ್ಟ ಉಲ್ಲಂಘನೆಯಾಗಿದ್ದು ಇಲ್ಲಿ ಸರ್ಕಾರದಿಂದ ಹಣ ಪಡೆಯುವ ದುರುದ್ದೇಶದಿಂದ ಕೃತಕ ದಾಖಲೆಗಳ ಸೃಷ್ಟಿಸಿ ಹಣ ಪಡೆದು ದುರುಪಯೋಗ ಪಡಿಸಿಕೊಂಡಿರುತ್ತಾರೆ ಎಂದು ದೂರುದಾರರ ಆರೋಪವು ರುಜುವಾತವಾಗಿರುತ್ತದೆ. ಈ ಕಾಮಗಾರಿ ಬಗ್ಗೆ ಚೆಕ್ ಮೇಜರ್ ಮೆಂಟ್ ಮಾಡಿರುವುದಿಲ್ಲ ಎಂಬ ಅಂಶ ಕಂಡುಬಂದಿದೆ.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಾಮಗಾರಿ ಹಣವನ್ನು ಇಲಾಖೆಯಲ್ಲಿ ಕುಳಿತ ಕೆಲ ರಣಹಸಿವಿನ ಅಧಿಕಾರಿ ಸಿಬ್ಬಂದಿ ವರ್ಗ ಹಾಗೂ ಕಳಪೆ ಕಾಮಗಾರಿ ಮಾಡಿ ತಿಂದು ಹಾಕಿದೆ. ಇಲ್ಲಿ ಈ ಹರಾಮ್‌ಕೋರ್ ಅಧಿಕಾರಿಗಳು ಆಡುವ ಆಟ ಹೇಗಿದೆ ನೋಡಿ !

ವಿಪಾರ್ಯಸಾ ವೆಂದರೆ ಕಾಮಗಾರಿ ಮಾಡದರೆ

ಬಿಲ್ ಮಾಡಿಸಿಕೊಂಡ ಗುತ್ತಿಗೆ ಗಾರಾರನ್ನು ಕಪ್ಪು

ಪಟ್ಟಿಗೆ ಸೆರಿಸಲು ಓಂಬಡ್ಸ್ ಪರ್ಸನ್ ಸಂಬದಪಟ್ಟ

ಅಧಿಕಾರಿಗಳಿಗೆ ಶಿಪಾರಸ್ತು ಮಾಡಬೇಕಿತ್ತು ಆದರೆ

ಯಾವಾದೆ ಶಿಪಾರಸ್ತು ಮಾಡಿಲ್ಲ ಮತ್ತು ದುರುದಾರರು (ಗ್ರಾಮಸ್ಥರು)ನೀಡಿರುವ ದುರಿನಲ್ಲಿ ಸರ್ಕಾರದ ಹಣ ಸುಮಾರು 50 ಲಕ್ಷಕ್ಕೂ ಹೆಚ್ಚು ಸರ್ಕಾರದ ಹಣ ದುರುಪಯೋಗ ಆಗಿರುವಂತಹ 
ಹಲವು ದೊಡ್ಡ ದೊಡ್ಡ ಕಾಮಗಾರಿಯ ತನೀಖೆಯಲ್ಲಿ ಕೈ ಬಿಟ್ಟು  ಕೇವಲ  400840 ರೂ ಗಳು ಮಾತ್ರ ಸರ್ಕಾರಿ ಹಣ ದುರುಪಯೋಗ ಅಗಿರುವುದಾಗಿ ತೀರ್ಮಾನಿಸಿದ್ದು . ಗ್ರಾಮಸ್ಥರ ಸಮ್ಮುಖದಲ್ಲಾಗಲಿ ದೂರುದಾರರ ಸಮ್ಮುಖಕವಾಗಲಿ ಗುತ್ತಿಗೆದಾರರ ವಿರುದ್ಧ ಯಾವ ವಿಚಾರಣೆಯು ನಡೆಸದೆ ಕೈ ತೊಳೆದು ಕೊಂಡಿದ್ದಾರೆ ಎಂಬುದು ಕನ್ನೇಮೆಡಿ ಗ್ರಾಮ ಪಂಚಾಯತಿ ಚಿತ್ತಗನಹಳ್ಳಿ
ಗ್ರಾಮದ ಜನತೆಯ ದೂರು ಅಗಿದೆ. ಈ ಕನ್ನೇಮೆಡಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ವರ್ಷಗಟ್ಟಲೆ ಕಾಮಗಾರಿ ಹೆಸರಿನಲ್ಲಿ ನಡೆದಿರುವ,ಈ ಮನೆ ಹಾಳು ಅಧಿಕಾರಿಗಳು ಸರ್ಕಾರದ ಕಣ್ಣಿಗೆ ಮಸೀಬಳಿದು ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡು ಕೇಳಿದರೆ ಹೃದಯ ಬಡಿತವೆ ನಿಲ್ಲುವಂತಹ ಇನ್ನು ಹಲವಾರು ಕಾಮಗಾರಿಯಾ ಹೆಸರಿನಲ್ಲಿ ಸರ್ಕಾರಕ್ಕೆ ವಂಚನೆ ಮಾಡಿರುವ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಬಗ್ಗೆ ದಾಖಲೆಗಳು ನಮ್ಮ ಪತ್ರಿಕೆಗೆ ಲಭ್ಯವಾಗಿದ್ದು.

ಇನ್ನಷ್ಟು ವಿಷಯಗಳ ತನಿಖೆ ಕುರಿತು ಮುಂದಿನ

ಸಂಚಿಕೆಯಲ್ಲಿ……..✍️✍️✍️