March 14, 2025

ಆಸ್ತಿಯ ವಿಚಾರದಲ್ಲಿ ನಡೆಯಿತಾ ಈ ಬರ್ಭರ ಕೊಲೆ.!?

Spread the love

ಶಿವಮೊಗ್ಗ :

ತಾಲೂಕಿನ ದುಮ್ಮಳ್ಳಿಯಲ್ಲೊಂದು ಕೊಲೆಯಾಗಿದೆ. ಹತ್ಯೆಯಾದವನ‌ ಮೃತ ದೇಹ ತೋಟದಲ್ಲಿ ಪತ್ತೆಯಾಗಿದೆ. ಹತ್ಯೆಯಾದವನನ್ನ ಸತೀಶ್ ನಾಯ್ಕ್ (28) ಎಂದು ಗುರುತಿಸಲಾಗಿದೆ.

ದುಮ್ಮಳ್ಳಿಯಲ್ಲಿ ಜಮೀನು ಹೊಂದಿದ್ದ ಸತೀಶ್ ಗೆ ಜಮೀನಿನ ವಿಚಾರದಲ್ಲಿ ಅಕ್ಕಪಕ್ಕದವರಿಂದ ಗಲಾಟೆ ಇತ್ತು ಎನ್ನಲಾಗಿದೆ. ಇಂದು ಬೆಳಿಗ್ಗೆ ಸತೀಶ್ ನನ್ನ ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿದವನನ್ನ ಅಖಿಲೇಶ್ ಎಂದು ಗುರುತಿಸಲಾಗಿದೆ.

ಮೃತ ಸತೀಶ್ ನ ತಂದೆ ಶೇಷಾ ನಾಯ್ಕ್ ಮಾಧ್ಯಮಗಳಿಗೆ ಮಾತನಾಡಿ, ನ್ಯಾಯಾಲಯದಲ್ಲಿ ನಮಗೂ ಮತ್ತು ಪಕ್ಕದ ಜಮೀನಿನ ಮಂಜಾನಾಯ್ಕ್ ಜೊತೆ ವ್ಯಜ್ಯವಿತ್ತು. ವ್ಯಜ್ಯ ತೀರ್ಮಾನವಾಗಿ ನಮ್ಮ ಪರವಾಗಿದೆ. ಇಂದು ಬೆಳಿಗ್ಗೆ ಮಗ ಸತೀಶ್ ನಾಯ್ಕ್ ಜಮೀಗೆ ಬಂದಾಗ ಮಂಜಾನಾಯ್ಕನ ಮಗ ಅಖಲೇಶ್ ಕಂದ್ಲಿಯಲ್ಲಿ ದಾಳಿ ನಡೆಸಿದ್ದಾನೆ ಎಂದು ದೂರಿದ್ದಾರೆ.


ಸತೀಶ್ ಸ್ಥಳದಲ್ಲಿ ಸಾವು ಕಂಡಿದ್ದಾನೆ. ಇನ್ನು ಅಖಿಲೇಶ್ ಬಂಧನವಾಗಬೇಕಿದೆ. ಆರೋಪಿಯ ತಾಯಿಯೂ ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಮೃತನ ತಂದೆ ಆರೋಪಿಸಿದ್ದಾರೆ. ತುಂಗ ನಗರ ಪೊಲೀಸ ಠಾಣೆ ಯಲ್ಲಿ ದೂರು ಧಾಖಲಾಗಿದ್ದು  ತನಿಖೆ ಮುಂದುವರಿಸಿದ್ದಾರೆ