March 14, 2025

ತುಮಕೂರು: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ.!?

Spread the love

ತುಮಕೂರು ಜಿಲ್ಲೆಯಲ್ಲಿ ಪಾಪಿ ತಂದೆಯಿಂದಲೇ ಮಗಳ ಮೇಲೆ ಪೈಶಾಚಿಕ ಕೃತ್ಯ ನಡೆದಿದೆ. ಹೆತ್ತ ಮಗಳ‌ ಮೇಲೆಯೇ ಕಾಮುಕ ತಂದೆ ಆತ್ಯಾಚಾರ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಿಪ್ಪೆತೋಪು ಬಡವಾಣೆಯಲ್ಲಿ ನಡೆದಿದೆ.

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಪಾಪಿ ತಂದೆಯಿಂದಲೇ ಮಗಳ ಮೇಲೆ ಪೈಶಾಚಿಕ ಕೃತ್ಯ ನಡೆದಿದೆ. ಹೆತ್ತ ಮಗಳ‌ ಮೇಲೆಯೇ ಕಾಮುಕ ತಂದೆ ಆತ್ಯಾಚಾರ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಗಾಂಧಿನಗರದ ಹಿಪ್ಪೆತೋಪು ಬಡವಾಣೆಯಲ್ಲಿ  ಮೇ 6 ರಂದು ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತನ್ನ ಹೆಂಡತಿ ಕೂಲಿ ಕೆಲಸಕ್ಕೆ ಎಂದು   ಹೊರಗಡೆ ಹೋದಾಗ ಒಂಟಿಯಾಗಿದ್ದ 13 ವರ್ಷದ ಅಪ್ರಾಪ್ತೆ ಮಗಳ ಮೇಲೆ ಆತ್ಯಾಚಾರ ನಡೆಸಿ ತಂದೆ ಪರಾರಿಯಾಗಿದ್ದಾನೆ. ಈ ಹಿಂದೆಯೂ ಒಮ್ಮೆ ಮಗಳ‌ ಮೇಲೆ ಆತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ.

ಘಟನೆ ಕುರಿತು ತಾಯಿಯಿಂದ ತಿಪಟೂರು ನಗರ ಠಾಣೆಗೆ ದೂರು ನೀಡಲಾಗಿದೆ. ತಾಯಿಯ ದೂರಿನ ಅನ್ವಯ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ತಿಪಟೂರು ‌ನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆ ಯಲ್ಲಿ ಆರೋಪಿಯನ್ನ ಯಡೇಮುರಿ ಕಟ್ಟಿ ನ್ಯಾಯಾಂಗಕ್ಕೆ ಬಂದನದಲ್ಲಿರಿಸಿದ್ದಾರೆ….