
ಬರಗಾಲದ ತೀವ್ರತೆ ದಿನ ಕಳೆದಂತೆ ಹೆಚ್ಚುತ್ತಿದ್ದು ಕಾಡು ಮೇಡುಗಳಲ್ಲಿ ಒಂದು ಗುಟುಕು ನೀರು ಸಿಗದೆ ಕಾಡು ಪ್ರಾಣಿಗಳು ಒದ್ದಾಡುವಂತಹ ಸ್ಥಿತಿ ಇದೇ ಮೊದಲ ಬಾರಿಗೆ ನಿರ್ಮಾಣವಾಗಿದೆ, ಪ್ರಾಣಿ ಪಕ್ಷಿಗಳ ನೀರಿನ ದಾಹ ತಣಿಸಲು ಅರಣ್ಯ ಇಲಾಖೆ ಮುಂದಾಗಿದೆ ಅರಣ್ಯದಲ್ಲಿ ಎಲ್ಲಂದರಲ್ಲಿ ತೊಟ್ಟಿಗಳನ್ನು ನಿರ್ಮಿಸಿ ನೀರು ಸಂಗ್ರಹಣೆ ಮಾಡಿ ಪ್ರಾಣಿ ಪಕ್ಷಿಗಳಿಗೆ ನೀರಿನ ಧಾಹ ತೀರಿಸಲು ಮುಂದಾಗಿ
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ. ಚೇಳೂರು ಹೋಬಳಿಯಲ್ಲಿ ಇರುವ ಅರಣ್ಯದಲ್ಲಿ.ಹೊಂಗೆ, ನೀಲಗಿರಿ, ಅಕೇಶಿಯಾ, ಹೀಗೆ ಹಲವಾರು ಜಾತಿಯ ಮರಗಳಿವೆ. ಇದರ ಜತೆಗೆ ಜಿಂಕೆ, ಕೃಷ್ಣಮೃ, ಕಾಡುಹಂದಿ, ತೋಳ, ಮೊಲ, ನವಿಲು ಹೀಗೆ ಅನೇಕ ಪ್ರಾಣಿ ಪಕ್ಷಿಗಳು ವಾಸ ಮಾಡುತ್ತಿವೆ, ಜಿಂಕೆಗಳು ಮತ್ತು ಕಾಡು ಹಂದಿಗಳು, ನವಿಲುಗಳು ಹೇರಳವಾಗಿ ಕಾಣ ಸಿಗುತ್ತವೆ. ಆದರೆ ಹಿಡಿ ಜಿಲ್ಲೆಯಲ್ಲಿ ಬರಗಾಲ. ಕಾಡಿನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.
ನೀರಿನ ಕೊರತೆಯಿಂದ ದೊಡ್ಡ ದೊಡ್ಡ ಮರಗಳು ಬಾಡಿ ಹೋಗಿವೆ, ಹಸಿರು ಹುಲ್ಲು ಹುಡುಕಿದರೂ ಕಾಣ ಸಿಗದು. ಕುರುಚಲು ಗಿಡಗಳು ಭೂಮಿಯಲ್ಲಿ ತೇವಾಂಶವಿಲ್ಲದೆ ಒಣಗಿ ಹೋಗಿವೆ, ಕಾಡಿನಲ್ಲಿ ತೋಡಿರುವ ಹೊಂಡಗಳು ನೀರಿಲ್ಲದೆ ಬತ್ತಿ ಹೋಗಿವೆ. ಕಾಡುಪ್ರಾಣಿ, ಪಕ್ಷಿ ಸಂಕುಲಕ್ಕೆ ಗುಟುಕು ನೀರೂ ಇಲ್ಲ. ಹೀಗಾಗಿ ಪ್ರಾಣಿಗಳು ರಾತ್ರಿ ವೇಳೆ ನೀರು ಹುಡಿಕಿಕೊಂಡು ಕಾಡಿನಿಂದ ನಾಡಿಗೆ ಅಲೆದಾಡುತ್ತಿವೆ.ನೀರು, ಆಹಾರಕ್ಕಾಗಿ ಜಿಂಕೆಗಳು ರೈತರ ಜಮೀನುಗಳಲ್ಲಿ ಬೆಳೆದಿರುವ ಹಿಪ್ಪುನೇರಳೆ ಸೊಪ್ಪು ತೋಟಗಳಿಗೆ ದಾಳಿ ಇಟ್ಟ ಹಂದಿಗಳು, ಆಲೂಗಡ್ಡೆ, ಕುಂಬಳ ಕಾಯಿ, ಗೆಣಸು ಮುಂತಾದ ತೋಟಗಳಿಗೆ ನುಗ್ಗಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ, ನವಿಲುಗಳು ನೀರಿಗೆ ಅರಸಿ ಸುತ್ತಮುತ್ತಲ ತೋಟಗಳತ್ತ ಧಾವಿಸುತ್ತವೆ. ನವಿಲುಗಳು ತಂಡೋಪ ತಂಡವಾಗಿ ತೋಟಗಳ ಕಡೆ ಬರುವುದನ್ನು ರೈತರು ಕಂಡಿದ್ದಾರೆ. ರೈತರು ಸಂಗ್ರಹಿಸುವ ನೀರಿನ ತೊಟ್ಟಿಗಳನ್ನು ಮುಳುಗಿ, ಈಜಾಡಿ ಹೋಗಿರುವ ಬಗ್ಗೆ ರೈತರು ಹೇಳುತ್ತಾರೆ.✍️
Gubbi RFO SATISH CHANDRA ನೇತೃತ್ವದಲ್ಲಿ ಪ್ರಾಣಿ ಪಕ್ಷಿಗಳ ನೀರಿನ ತೊಟ್ಟಿ ನಿರ್ಮಿಸಲಾಗಿದೆ.
