
ಎಸ್‌ಎಸ್‌ಎಲ್‌ಸಿ ಫಲಿತಾಂಶ ಇದೀಗ ತಾನೆ ಹೊರಬಿದ್ದಿದೆ, ಲಕ್ಷ ಲಕ್ಷ ವಿದ್ಯಾರ್ಥಿಗಳು ಕಾದು ಕುಳಿತಿದ್ದ SSLC ರಿಸಲ್ಟ್ ಇಂದು ಘೋಷಣೆ ಆಗಿದೆ. ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ & ಭವಿಷ್ಯದ ಭಾರತಕ್ಕೆ ವಿಜ್ಞಾನಿಗಳು, ಚಿಂತಕರು, ಶಿಕ್ಷಕರು, ನೌಕರರು, ಸಾಧಕರನ್ನು ನೀಡುವ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಘೋಷಣೆ ಆಗಿದೆ. ಹಾಗಾದರೆ ಯಾವ ಜಿಲ್ಲೆಗೆ ಇದೀಗ ಪ್ರಥಮ ಸ್ಥಾನ ಸಿಕ್ಕಿದೆ?
2023-24ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು ಅವರು (625/625) ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. SSLC ಫಲಿತಾಂಶದಲ್ಲಿ ರಾಜ್ಯಕ್ಕೆ ಉಡುಪಿ ಜಿಲ್ಲೆ (94%) ಪ್ರಥಮ ಸ್ಥಾನ ಪಡೆದುಕೊಂಡಿದೆ. ಇನ್ನು, ಕೊನೆಯ ಸ್ಥಾನ ಯಾದಗಿರಿ ಜಿಲ್ಲೆ (50.59%) ಪಡೆದುಕೊಂಡಿದೆ.
7 ವಿದ್ಯಾರ್ಥಿಗಳು ದ್ವೀತಿಯ ಸ್ಥಾನ
ಮೇದಾ ಪಿ ಶೆಟ್ಟಿ ( ಬೆಂಗಳೂರು) 624/625
ಹರ್ಷಿತಾ ಡಿಎಂ (ಮಧುಗಿರಿ)
ಚಿನ್ಮಯ್ (ದಕ್ಷಿಣ ಕನ್ನಡ)
ಸಿದ್ಧಾಂತ್ (ಚಿಕ್ಕೋಡಿ )
ದರ್ಶನ್ (ಶಿರಸಿ)
ಚಿನ್ಮಯ್ (ಶಿರಸಿ)
ಶ್ರೀ ರಾಮ್ ಶಿರಸಿ