
ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸರ್ಕಾರದ ಮಹಿಳಾ ಅಧಿಕಾರಿಗಳಿಬ್ಬರು ಹೇಳಿಕೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಪ್ರತ್ಯೇಕ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.
ಈ ಕುರಿತು ಎಸ್‌ಐಟಿ ಅಧಿಕಾರಿಗಳು ಸಹಾಯವಾಣಿ (6360938947) ಆರಂಭಿಸಿದ್ದಾರೆ.ಲೈಂಗಿಕದೌರ್ಜನ್ಯಕ್ಕೆ ಒಳಪಟ್ಟವರು ಧೈರ್ಯವಾಗಿ ಈ ನಂಬರ್ ಗೆ ಕರೆ ದೂರು ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಲೈಂಗಿಕ ದೌರ್ಜನ್ಯ ಒಳಪಟ್ಟವರಿಗೆ ಧೈರ್ಯವನ್ನು ತುಂಬಿ ದೂರು ನೀಡಲು ಮುಂಬರುವಂತೆ ಮನವೊಲಿಸುವಂತಹ ಕಾರ್ಯವನ್ನು ಮಾಡಲಾಗಿದೆ. ದೂರು ನೀಡಲು ಮುಂದೆ ಬಾರದೆ ಇರುವಂತಹ ಸಂತ್ರಸ್ಥೆಯರಿಗೆ ಸಹಾಯವಾಣಿಯನ್ನು ನಿರ್ಮಿಸಲಾಗಿದೆ. ಒಟ್ಟಾರ್ ನಮ್ಮ ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ನವರು ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ ಎನ್ನಲಾಗಿದೆ.ಇದು ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.