March 14, 2025

ಚುನಾವಣಾಧಿಕಾರಿ ಏಕಾಏಕಿ ಸಾವು

Spread the love



ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಕೃಷಿ ಅಧಿಕಾರಿಯೊಬ್ಬರು ಆನಂದ್ (31) ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ  ಇಂದು ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಕೋಡಂಬಲ್‌ ಗ್ರಾಮದ ಬಳಿ ನಡೆದಿದೆ.

ಕೋಡಂಬಲ್ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುವಾಗ ಆನಂದ್ ಅವರಿಗೆ ಹೃದಯಘಾತವಾಗಿದೆ.

ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಮಾರ್ಗ ಮಧ್ಯ ಕೃಷಿ ಅಧಿಕಾರಿ ಆನಂದ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.