
ಮಲೈ ಮಹದೇಶ್ವರ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ತೀವ್ರವಾದ ತೊಂದರೆ ಉಂಟಾಗುತ್ತಿದೆ. ಪ್ರಚಾರಗೊಳ್ಳುತ್ತಿರುವ ಮಾಹಿತಿ ಪ್ರಕಾರ, ದೇವಾಲಯದ ಪ್ರದರ್ಶನ ಸ್ಥಳದಲ್ಲಿ ಭಕ್ತರು ಪಾದರಕ್ಷೆಗಳಿಲ್ಲದೆ ನಿಂತಾಗ ಬಿಸಿಲಿನ ತಾಪ ಹೆಚ್ಚಾಗಿ ಅವರ ಕಾಲುಗಳಿಗೆ ಬೊಬ್ಬೆಗಳು ಉಂಟಾಗುತ್ತಿವೆ. ಇದರಿಂದಾಗಿ ಅವರು ತೀವ್ರವಾದ ನೋವು ಅನುಭವಿಸುತ್ತಿದ್ದಾರೆ.

ಆದಾಗ್ಯೂ, ಈ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವ ಬದಲಿಗೆ ದೇವಾಲಯದ ಆಡಳಿತ ಮಂಡಳಿ ಕೇವಲ ಒಂದು ಟ್ರ್ಯಾಕ್ಟರ್ ಬಳಸಿ ನೀರು ಹಾಯಿಸುತ್ತಿರುವುದು ದೃಷ್ಟಿಗೋಚಿಯಾಗಿದೆ. ಇದು ತಾತ್ಕಾಲಿಕ ಪರಿಹಾರವಾಗಬಹುದು, ಆದರೆ ಪೂರ್ಣ ಪ್ರಮಾಣದ ವ್ಯವಸ್ಥೆಯ ಕೊರತೆಯಾಗಿ ಭಕ್ತರಿಗೆ ನಿರಂತರ ತೊಂದರೆ ಆಗುತ್ತಿದೆ. ಆಡಳಿತ ಮಂಡಳಿಯ ಈ ನಿರ್ಲಕ್ಷ್ಯ ಭಕ್ತರಲ್ಲಿ ಅಸಮಾಧಾನ ಮೂಡಿಸಿದೆ.

ಹಣದ ವಸೂಲಿ, ಕಾರ್ ಪಾರ್ಕಿಂಗ್ ನಲ್ಲಿ ಸಮಸ್ಯೆ ಮತ್ತು ಭಕ್ತರಿಗೆ ಅವಾಮಾನ..!
ದೇವಾಲಯದ ಆವರಣದಲ್ಲಿ ಹಣದ ವಸೂಲಿ ಗಣನೀಯ ಪ್ರಮಾಣದಲ್ಲಿ ನಡೆಯುತ್ತಿದ್ದು, ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಭಕ್ತರಿಗೆ ಅನ್ಯಾಯ ನಡೆಯುತ್ತಿರುವುದು ವರದಿಯಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರನ್ನು ಪಾರ್ಕಿಂಗ್ ಸ್ಥಳದಲ್ಲಿ ಅವಹೇಳನಕಾರಿ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ. ವಸೂಲಿ ಕಾರ್ಯ ಮಾತ್ರ ಸುಗಮವಾಗಿ ನಡೆಯುತ್ತಿದೆ ಆದರೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸೌಕರ್ಯ ಸ್ವಚತೆ ಬಗ್ಗೆ ಯಾವ ಆಡಳಿತವು ಗಮನ ಅರಸುತ್ತಿಲ್ಲ.

ವಯೋವೃದ್ಧ ಭಕ್ತರಿಗೆ ದರ್ಶನ ಪಡೆಯಲು ಸಹ ಸೂಕ್ತವಾದ ವ್ಯವಸ್ಥೆ ಇಲ್ಲ. ದರ್ಶನ ಗೇಟ್‌ನಲ್ಲಿ ಭಕ್ತರಿಂದ ಬೇದ ಭಾವ ತೋರುವ ವ್ಯವಸ್ಥಾಪಕರು, ಅವರ ಅಗತ್ಯಗಳನ್ನು ಕಡೆಗಣಿಸುತ್ತಿದ್ದಾರೆ. ಇದರಿಂದ ಭಕ್ತರು ದೇವಾಲಯದ ಆಡಳಿತ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ.
ಭಕ್ತರ ಆಕ್ರೋಶ: ದೇವರ ಹೆಸರಲ್ಲಿ ಹಣದ ಲೂಟಿ
ಆದಾಯದ ಮಟ್ಟದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಈ ದೇವಾಲಯದಲ್ಲಿ ಹಣದ ಲೂಟಿ ನಡೆಯುತ್ತಿದೆ ಎಂಬ ಆರೋಪ ಭಕ್ತರಿಂದ ಕೇಳಿ ಬರುತ್ತಿದೆ. ಹಣದ ಸಂಪತ್ತು ಹೆಚ್ಚಿಸುವ ಹಂಬಲದಲ್ಲಿ ಭಕ್ತರ ಅನುಕೂಲತೆಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ.
ಭಕ್ತರು ದೇವಾಲಯದ ಆಡಳಿತ ಮಂಡಳಿಯಿಂದ ಸ್ಪಷ್ಟೀಕರಣವನ್ನು ಮತ್ತು ಸೂಕ್ತ ಪರಿಹಾರವನ್ನು ಆಗ್ರಹಿಸುತ್ತಿದ್ದಾರೆ. ಈ ಬಗೆಯ ನಿರ್ಲಕ್ಷ್ಯ ಭಕ್ತರ ನಂಬಿಕೆಯನ್ನು ಕಳೆದುಹಾಕುವಂತಿದೆ. ಆಡಳಿತ ಮಂಡಳಿಯು ಈ ಬಗ್ಗೆ ತಕ್ಷಣವೇ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಗಮನ ಅರಿಸಿ ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರಿಗೆ ಅನುಕೂಲ ವಾಗುವಂತೆ ವ್ಯವಸ್ಥಿತವಾಗಿ ಸಮಸ್ಯೆ ಯನ್ನು ಪೂರೈಸಬೇಕೆಂದು ಸರ್ವಜನಿಕರು ಹೇಳಿಕೊಂಡಿದ್ದಾರೆ .ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ಎದುರು ಪ್ರತಿಭಟನೆ ನಡೆಸುವುದಾಗಿ ಭಕ್ತಿದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ..