
ಮೊಬೈಲ್ ಪಕ್ಕದಲ್ಲಿ ಇಟ್ಟುಕೊಂಡು ಮಲಗುವ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕ ಎಂದು ಹಲವು ಸಂಶೋಧನೆಗಳು ಎಚ್ಚರಿಕೆ ನೀಡಿವೆ. ಮೊಬೈಲ್ ನಿಂದ ಬೀರುವ ವಿಕಿರಣಗಳು ಮಾನವ ದೇಹದ ಮೇಲೆ ವಿವಿಧ ರೀತಿಯ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.
ಮೊಬೈಲ್ ಬಳಕೆಯು ಬಂಜೆತನವನ್ನು ಹೆಚ್ಚಿಸುವ ಸಂಭವವಿದೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಇದು ಪುರುಷರ ಮತ್ತು ಮಹಿಳೆಯರ ಫಲವತ್ತತೆ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದು. ಮೊಬೈಲ್ ನಿಂದ ಬೀರುವ ವಿದ್ಯುತ್ಚುಂಭಕ ವಿಕಿರಣಗಳು ಶಕ್ತಿ ಕೋಶಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡುತ್ತವೆ ಮತ್ತು ದೀರ್ಘಾವಧಿಯಲ್ಲಿ ಬಂಜೆತನದ ಮಟ್ಟವನ್ನು ಹೆಚ್ಚಿಸಬಹುದು.
ತಲೆಯ ಹತ್ತಿರ ಮೊಬೈಲ್ ಇಟ್ಟುಕೊಂಡು ಮಲಗುವ ಅಭ್ಯಾಸ ತಲೆಗೆ ಸಂಬಂಧಿಸಿದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂಬ ಆಲೋಚನೆಯೂ ಇದೆ. ವಿದ್ಯುತ್ಚುಂಭಕ ವಿಕಿರಣಗಳು ದೀರ್ಘಾವಧಿಯಲ್ಲಿ ಕ್ಯಾನ್ಸರ್ ಸಮಸ್ಯೆಯನ್ನು ಉಂಟುಮಾಡಬಹುದೆಂಬ ಆತಂಕವಿದೆ.
ಗರ್ಭಿಣಿಯರಿಗೆ ಮೊಬೈಲ್ ಬಳಕೆಯು ವಿಶೇಷವಾದ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಭ್ರೂಣದ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಮತ್ತು ನ್ಯೂರೋಡೆವಲಪ್ಮೆಂಟಲ್ ಸಮಸ್ಯೆಗಳಿಗೂ ಕಾರಣವಾಗಬಹುದು.
ಒತ್ತಡ ಮತ್ತು ಆತಂಕ ಹೆಚ್ಚುವುದು ಮೊಬೈಲ್ ಬಳಕೆಯ ಮತ್ತೊಂದು ನಕಾರಾತ್ಮಕ ಪರಿಣಾಮವಾಗಿದೆ. ಮೊಬೈಲ್‌ನಿಂದ ಬರುವ ಕಿರಿಕಿರಿ ಶಬ್ದಗಳು, ಬೆಳಕು, ಮತ್ತು ಸೂಚನೆಗಳು ಮನಸ್ಸಿಗೆ ಒತ್ತಡ ಉಂಟುಮಾಡುತ್ತವೆ. ಇದರ ಪರಿಣಾಮವಾಗಿ ಉತ್ತಮ ನಿದ್ರೆ ಇಲ್ಲದಿರುವುದು ಸಹಜ.
ಅಂತೆಯೇ, ಮೊಬೈಲ್ ಬಳಕೆಯು ನಿದ್ರಾಹೀನತೆಯ ತೊಂದರೆಗೂ ಕಾರಣವಾಗಬಹುದು. ಮೊಬೈಲ್‌ನಿಂದ ಬರುವ ನೀಲಿ ಬೆಳಕು (Blue Light) ನಮ್ಮ ನಿದ್ರೆಯ ಹಾರ್ಮೋನ್ ಮೆಲಟೊನಿನ್ ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ, ಇದರಿಂದ ಸರಿಯಾಗಿ ನಿದ್ರೆ ಬರಲು ಅಡಚಣೆ ಉಂಟಾಗುತ್ತದೆ.
ಈ ಎಲ್ಲ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು, ಹಾಸಿಗೆ ಬಳಿ ಮೊಬೈಲ್ ಇಟ್ಟುಕೊಂಡು ಮಲಗುವ ಅಭ್ಯಾಸವನ್ನು ಬಿಟ್ಟು, ಮೊಬೈಲ್ ಅನ್ನು ಹಾಸಿಗೆಯಿಂದ ದೂರದಲ್ಲಿಟ್ಟು ನಿದ್ರೆ ಮಾಡುವುದು ಉತ್ತಮ.